ಜಾರಕಿಹೊಳಿ ಕುಟುಂಬಕ್ಕೆ ಪದೆ ಪದೆ ಸಚಿವ ಸ್ಥಾನ ಸಿಗಬೇಕೆಂದು ಅಂಬೇಡ್ಕರ್ ಸಂವಿಧಾನದಲ್ಲಿ ಬರದಿಲ್ಲ: ಸತೀಶ್ ಜಾರಕಿಹೊಳಿ

ಬೆಳಗಾವಿ : ಬಿಜೆಪಿ ಒಂದು ಶಿಸ್ತು ಬದ್ದ ರಾಷ್ಟ್ರೀಯ ರಾಜಕೀಯ ಪಕ್ಷ ಎನ್ನುವವರಿಗೆ ಅವರ ನಾಯಕರು ಬುದ್ದಿ ಹೇಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಟಿ ರವಿ ಹಾಗೂ ಈಶ್ವರಪ್ಪನವರು ಉನ್ನತ ಮಟ್ಟದ ಸ್ಥಾನಮಾನದಲ್ಲಿದ್ದಾರೆ ಅಂತವರೇ ಬೇಕಾಬಿಟ್ಟಿ ಹೇಳಿಕೆಗಳನ್ನು ಕೊಡ್ತಾ ಹೋದ್ರೆ ನಾವು ಅದಕ್ಕೇಲ್ಲ ಉತ್ತರ ಕೊಡುವುದಕ್ಕೆ ಆಗುವುದಿಲ್ಲ ಇದರಿಂದ ಅವರ ಪಕ್ಷಕ್ಕೆ ಹಾನಿ ಎಂದು ಹೇಳಿದರು.
ಇದೆ ವೇಳೆ ಈ ಬಾರಿ ಯಾರೊಬ್ಬರು ಜಾರಕಿಹೊಳಿ ಕುಟುಂಬದಿಂದ ಮಂತ್ರಿ ಅಗಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದಾ ಜಾರಕಿಹೊಳಿ ಕುಟುಂಬಸ್ಥರು ಸಚಿವ ಸ್ಥಾನದಲ ಇರಬೇಕೆಂದು ಅಂಬೇಡ್ಕರ್ ಸಂವಿಧಾನದಲ್ಲಿ ಬರದಿಲ್ಲವೆಂದು ತಿಳಿಸಿದರು.
ಇದೆ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಘೋಷಣೆಯ ಮಾತು ಈಗಿಲ್ಲ, ಚುನಾವಣೆ ಬಳಿಕ ನಾವು ಗೆದ್ದ ಮೇಲೆ ಮೇ ತಿಂಗಳಲ್ಲಿ ಗೊತ್ತಾಗುತ್ತದೆ ಎಂದರು. ಈ ಬಗ್ಗೆ ಪಕ್ಷ ನಿರ್ಣಾಯ ಮಾಡುತ್ತದೆ ಎಂದು ತಿಳಿಸಿದರು.
ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಯ ಅಧಿಕಾರ ಅವದಿಯಲ್ಲಿ ಪೆಟ್ರೊಲ್, ಡಿಸೇಲ್ ಸೇರಿದಂತೆ ದಿನನಿತ್ಯ ಸಾಮಾಗ್ರಿಗಳ ಬೆಲೆ ಗಗನಕ್ಕೇರುತ್ತಲೆವೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಪ್ರತಿಭಟನೆ ಮಾಡುತ್ತೆ. ಮತ್ತು ಮುಂದಿನ ಚುನಾವಣೆಗಳಲ್ಲಿ ಜನರು ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ತಿಳಿಸಿದರು.
