Breaking NewsLatestವಿದೇಶಸುದ್ದಿ
Donald Trump: ಜೋ ಬೈಡೆನ್ ರಾಜೀನಾಮೆಗೆ ಡೊನಾಲ್ಡ್ ಟ್ರಂಪ್ ಒತ್ತಾಯ

ವಾಷಿಂಗ್ಟನ್: ಅಫ್ಘಾನಿಸ್ತಾನದಿಂದ ಅಮೆರಿಕದ ಸೈನ್ಯವನ್ನು ವಾಪಾಸ್ ಕರೆಸಿಕೊಂಡ ಪರಿಣಾಮ ತಾಲಿಬಾನ್ ಉಗ್ರರು ಇಡೀ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯಲು ಅವಕಾಶವಾಗಿದ್ದು, ನೈತಿಕ ಹೊಣೆ ಹೊತ್ತು ಅಮೆರಿಕದ ಅಧ್ಯಕ್ಷ ಜೋ- ಬೈಡೆನ್ ಅವರ ರಾಜೀನಾಮೆ ನೀಡಬೇಕು ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.
ನಿರಂತರವಾಗಿ ಅಮೆರಿಕ ನೇತೃತ್ವದ ಸೇನಾಪಡೆಗಳು ತಾಲಿಬಾನಿಗಳನ್ನು ಮಟ್ಟಹಾಕಿ ಸದ್ದಡಗಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದವು. ಸುಮಾರು 20 ವರ್ಷಗಳ ನಂತರ ಸೈನ್ಯವನ್ನು ವಾಪಸ್ ಪಡೆಯಲಾಗಿದೆ. ಅಫ್ಘಾನಿಸ್ತಾನದ ವಿಷಯದಲ್ಲಿ ಜೋ ಬೈಡನ್ ತಾಳಿರುವ ನಿಲುವು ಖಂಡನೀಯವಾದದ್ದು. ಅಮೆರಿಕಕ್ಕೆ ಇತಿಹಾಸದಲ್ಲೇ ದೊಡ್ಡ ಸೋಲಾಗಿದೆ ಎಂದು ಟ್ರಂಪ್ ಟೀಕಿಸಿದ್ದಾರೆ.
