Latestಚಿಕ್ಕಮಗಳೂರುಪ್ರವಾಸರಾಜ್ಯ

ಪ್ರವಾಸಿ ತಾಣಗಳಿಗೆ ನಿಗದಿತ ಸಂಖ್ಯೆಯಲ್ಲಿ ವಾಹನ ಸಂಚರಿಸುವ ನಿಯಮ

ಚಿಕ್ಕಮಗಳೂರು: ಕೋವಿಡ್ ನಿರ್ವಹಣೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಸಂಚರಿಸಲು ನಿಗದಿತ ಸಂಖ್ಯೆಯಲ್ಲೇ ವಾಹನ ಸಂಚಾರದ ನಿಯಮ ವಿಧಿಸಲಾಗಿದೆ. ಹೆಚ್ಚು ವಾಹನಗಳು, ಜನ ಸಂಚಾರಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.

ಜಿಲ್ಲೆಯ ಪ್ರವಾಸಿ ತಾಣಗಳಾದ ಮುಳ್ಳಯನಗರಿ, ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಹಿತ ವಿವಿಧ ತಾಣಗಳು, ಝರಿ, ಜಲಪಾತಗಳಿಗೆ ಬೆಳಗ್ಗೆ 6 ರಿಂದ 9 ರವರೆಗೆ ಮಧ್ಯಾಹ್ನ 2ರಿಂದ 4ರವರೆಗೆ ನಿಗದಿತವಾಗಿ ವಾಹನ ಹಾಗೂ ಪ್ರವಾಸಿಗರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಒಂದು ಬಾರಿಗೆ 150 ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ದಿನಕ್ಕೆ 300 ವಾಹನಗಳು ಮಾತ್ರ ಸಂಚರಿಸಬಹುದು. ದಿನಕ್ಕೆ 1200 ಜನ ಸಂಚರಿಸಬಹುದು. ಹೋಂ ಸ್ಟೇ, ರೆಸಾರ್ಟ್ ಬುಕಿಂಗ್ ಮಾಡಿದವರು ದಾಖಲೆಗಳನ್ನು ತೋರಿಸಿ ಹೋಗಬೇಕು. ಸ್ಥಳೀಯ ಖಾಸಗಿ ವಾಹನಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ.

ಅಯ್ಯನಕೆರೆ, ಹಿರೇಕೊಳಲೆ ಹಾಗೂ ರತ್ನಗಿರಿ ಬೋರೆಗಳಿಗೂ ಪ್ರವಾಸಿಗರ ಪ್ರವೇಶಕ್ಕೆ ನಿಯಮ ವಿಧಿಸಲಾಗಿದೆ. ಅಯ್ಯನಕೆರೆ ಹಾಗೂ ರತ್ನಗಿರಿ ಬೋರೆಗಳಿಗೆ ಯಾವುದೇ ಸಮಯದಲ್ಲಿ 200 ಜನ ಮತ್ತು ಹಿರೇಕೊಳಲೆಗೆ 100 ಜನ ಪ್ರವಾಸಿಗರು ಸಂಚರಿಸಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button