Uncategorized

‘ಮಹಾಸಮುದ್ರಂ’ದ ಹಾಡಿನ ಬಗ್ಗೆ ಕಿಡಿಕಾರಿದ ನೆಟ್ಟಿಗರು ಯಾಕೆ ಗೊತ್ತಾ?

ಮುಂಬರುವ ‘ಮಹಾಸಮುದ್ರಂ’ ಚಿತ್ರದಲ್ಲಿ ಶರ್ವಾನಂದ್ ಮತ್ತು ಸಿದ್ಧಾರ್ಥ್ ಒಟ್ಟಿಗೆ ಕೆಲಸಮಾಡುತ್ತಿದ್ದಾರೆ. ಚಿತ್ರದ ಸಂಪೂರ್ಣ ಚಿತ್ರೀಕರಣ ಮುಗಿದಿದೆ. ಕೆಲವು ದಿನಗಳ ಹಿಂದೆ ‘ಮಹಾಸಮುದ್ರಂ’ ಚಿತ್ರದ ‘ಹೇ ರಂಭ’ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಶರ್ವಾನಂದ್ ಮತ್ತು ಜಗಪತಿ ಬಾಬು ನಟಿಸಿದ್ದಾರೆ.

ಸಮುದ್ರ ತೀರದಲ್ಲಿ ಚಿತ್ರೀಕರಿಸಲಾದ ಈ ಹಾಡನ್ನು ಚೈತನ್ಯ ಭಾರದ್ವಾಜ್ ಸಂಯೋಜಿಸಿದ್ದಾರೆ. ಈ ಹಾಡಿನ ಬಗ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹಾಡಿನಲ್ಲಿ ಅವಹೇಳನಕಾರಿ ಸಾಹಿತ್ಯವನ್ನು ಹಾಕಿದ್ದಾರೆ ಎಂದು ನೆಟ್ಟಿಗರು ನಿರ್ಮಾಪಕ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಈ ಹಾಡಿನಲ್ಲಿ ಹಿಂದೂ ದೇವರುಗಳು ಗೋವರ್ಧನ ಗಿರಿಯನ್ನು ಎತ್ತಿದ್ದಾರೆ, ನಮ್ಮಂತಹ ಸಾಮಾನ್ಯರು ಏಕೆ ಮದ್ಯದ ಬಾಟಲಿಯನ್ನು ಎತ್ತಲು ಸಾಧ್ಯವಿಲ್ಲ” ಎಂಬ ಸಾಹಿತ್ಯವಿದೆ. ಇದರಲ್ಲಿ ನೆಟ್ಟಿಗರು ತಪ್ಪನ್ನು ಹುಡುಕುತ್ತಿದ್ದಾರೆ. ಈ ಚಿತ್ರದ ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ಹಾಕುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button