Breaking NewsLatestಇತರ ಕ್ರೀಡೆಕ್ರೀಡೆರಾಷ್ಟ್ರೀಯ

ಆಗಸ್ಟ್ 7: ರಾಷ್ಟ್ರೀಯ ಜಾವಲಿನ್ ದಿನ

ಹೊಸದಿಲ್ಲಿ: ಆಗಸ್ಟ್ 7, ಭಾರತೀಯರ ಪಾಲಿಗೆ ಈ ದಿನ ಇನ್ನು ರಾಷ್ಟ್ರೀಯ ಜಾವಲಿನ್ ದಿನವಾಗಲಿದೆ.

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಆಗಸ್ಟ್ 7 ರಂದು ಭಾರತದ ನೀರಜ್ ಚೋಪ್ರಾ ಜಾವಲಿನ್ ಎಸೆತದಲ್ಲಿ ಐತಿಹಾಸಿಕ ಚಿನ್ನ ಗೆದ್ದರು. ಆ ದಿನವನ್ನು ಅವಿಸ್ಮರಣೀಯ ಗೊಳಿಸುವುದಕ್ಕಾಗಿ ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ಆಗಸ್ಟ್ 7ನ್ನು ರಾಷ್ಟ್ರೀಯ ಜಾವಲಿನ್ ದಿನವನ್ನಾಗಿ ಘೋಷಿಸಿದೆ.

ಟೋಕಿಯೋದಲ್ಲಿ ನೀರಜ್ 87.58 ಮೀ. ದೂರಕ್ಕೆ ಜಾವಲಿನ್ ಎಸೆದು ಒಲಿಂಪಿಕ್ಸ್ ನ ಅಥ್ಲೆಟಿಕ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎನಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button