ಮಂಡ್ಯ

ಕೋವಿಡ್ ನಿಯಂತ್ರಣಕ್ಕೆ ಮುಂದಾದ ಜಿಲ್ಲಾಡಳಿತ; ಇಂದಿನಿಂದ ನಿಷೇಧಾಜ್ಞೆ

ಮಂಡ್ಯ : ಕೊವಿಡ್-19 ಮೂರನೇ ಅಲೆ ನಿಯಂತ್ರಣಕ್ಕೆ ಮಂಡ್ಯ ಜಿಲ್ಲಾಡಳಿತ ಮುಂದಾಗಿದ್ದು, ಇಂದಿನಿಂದ. 144 ಸೆಕ್ಷನ್ ಜಾರಿ ಮಾಡಿದೆ.

ಅತೀ ಹೆಚ್ಚು ಜನ ಸೇರುವ ಮದುವೆ, ಬೀಗರ ಔತಣ, ಅಂತ್ಯ ಸಂಸ್ಕಾರ, ತಿಥಿ ಕಾರ್ಯಕ್ರಮಗಳಿಗೆ ಕೇವಲ 30 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ದೇವಾಲಯಗಳಲ್ಲಿ ದೈನಂದಿನ ಪೂಜಾ ಕೈಂಕರ್ಯಕ್ಕೆ ಅವಕಾಶ ನೀಡಿದ್ದು, ವೀಕೆಂಡ್ ಗಳಲ್ಲಿ ದೇವಸ್ಥಾನ ಪ್ರವೇಶ ರದ್ದು ಮಾಡಲಾಗಿದೆ. ಅಲ್ಲದೆ ಅಮವಾಸ್ಯೆ, ಹುಣ್ಣಿಮೆ, ಧಾರ್ಮಿಕ ಸೇವೆ, ಉತ್ಸವ, ಜಾತ್ರೆಗಳನ್ನು ನಿರ್ಭಂದ ಏರಿ ಜಿಲ್ಲಾಧಿಕಾರಿ ಎಸ್. ಅಶ್ವಥಿ ಆದೇಶ ಹೊರಡಿಸಿದ್ದಾರೆ.

ಸಭೆ, ಸಮಾರಂಭ, ರ್ಯಾಲಿ, ಧರಣಿ, ಮುಷ್ಕರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವ ಜಿಲ್ಲಾಡಳಿತ, ಸದ್ಯ ಮಂಡ್ಯ ಜಿಲ್ಲೆಯಲ್ಲಿ ಪಾಸಿಟಿವ್ ರೇಟ್‌ ಕಡಿಮೆಯಿದ್ದರೂ ಈ ಆದೇಶ ಹೊರಡಿಸಿರೋ ಜಿಲ್ಲಾಡಳಿತ ಜನರು ಎಚ್ಚರಿಕೆ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಡು ಟಫ್ ರೂಲ್ಸ್ ಗೆ ಮುಂದಾಗೋದಾಗಿ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button