Breaking NewsLatestಜಿಲ್ಲಾ ಸುದ್ದಿಬೆಂಗಳೂರುರಾಜ್ಯಸುದ್ದಿ
ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್

ಬೆಂಗಳೂರು: ಬೆಂಗಳೂರಿನ ಕೆಲವು ಭಾಗಗಳಲ್ಲಿ ಇಂದು ಪವರ್ ಕಟ್ ಇರಲಿದೆ.
ಬೆಸ್ಕಾಂ ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಎರಡೂ ನಗರದಾದ್ಯಂತ ಕೆಲವು ಕಾರ್ಯಾಚರಣೆ ಮತ್ತು ನಿರ್ವಹಣಾ ಕಾರ್ಯಗಳನ್ನು ನಡೆಸಲಿರುವ ಹಿನ್ನೆಲೆಯಲ್ಲಿ ಇಂದು ಸಂಜೆಯವರೆಗೆ ಹಲವೆಡೆ ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಮಾಹಿತಿ ನೀಡಿದೆ.
ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಬೆಂಗಳೂರಿನ ಹಲವೆಡೆ ಪವರ್ ಕಟ್ ಇರಲಿದೆ. ಇಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್, ಸುಬ್ರಹ್ಮಣ್ಯಪುರ, ಸೋಮನಹಳ್ಳಿ, ಹೂಡಿ, ಶಿವಾಜಿನಗರ ವಿಭಾಗ, ಎಸ್‌ಆರ್‌ಎಸ್ ಪೀಣ್ಯ, ಯರ್ರಂಡನಹಳ್ಳಿ, ಬಿಡದಿಯಲ್ಲಿ ಪವರ್ ಕಟ್ ಇರಲಿದೆ.
