Breaking NewsLatestಜಿಲ್ಲಾ ಸುದ್ದಿಮೈಸೂರುರಾಜ್ಯಸುದ್ದಿ
ಬಸ್ ನಿಲ್ದಾಣದ ಗುಂಬಜ್ ತೆರವು ಮಾಡಿಸುತ್ತೇನೆ ಅಂದಿದ್ದ, ಮಾಡಿಸಿದ್ದೇನೆ – ಸಂಸದ ಪ್ರತಾಪ್ ಸಿಂಹ

ಮೈಸೂರು: ನಗರದಲ್ಲಿ ಬಸ್ ನಿಲ್ದಾಣವೊಂದನ್ನು ಮಸೀದಿಯ ಗುಂಬಜ್ ತರದಲ್ಲಿ ನಿರ್ಮಿಸಲಾಗಿತ್ತು. ಇದಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ಷೇಪ ವ್ಯಕ್ತ ಪಡಿಸಿದ್ದರು. ಅಲ್ಲದೇ ತೆರವಿಗಾಗಿ ಒತ್ತಾಯಿಸಿದ್ದರು.
ಈ ಬೆನ್ನಲ್ಲೇ ತೆರವುಗೊಳಿಸಲಾಗಿದೆ. ಜೊತೆಗೆ ತಾನು ಹೇಳಿದಂತೆ ನಡೆದುಕೊಂಡಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವಂತ ಅವರು, ಬಸ್ ನಿಲ್ದಾಣದಲ್ಲಿ ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೇ ಅದು ಮಸೀದಿ ತಾನೇ ಎಂದು ಪ್ರಶ್ನಿಸಿದ್ದಾರೆ.
ನಾನು ಮಸೀದಿ ಹೋಲುವಂತ ಬಸ್ ನಿಲ್ದಾಣದ ಗುಂಬಜ್ ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ ಎಂದಿದ್ದಾರೆ.
ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗೂ ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ಶಾಸಕ ರಾಮದಾಸ್ ಗೆ ಧನ್ಯವಾದವನ್ನು ಕೂಡ ತಿಳಿಸಿದ್ದಾರೆ.
