ಬೆಳಗಾವಿ

ಬೆಳಗಾವಿ ಚೆಕ್​ಪೋಸ್ಟ್​ಗೆ ಎಡಿಜಿಪಿ ಭೇಟಿ; ಹೆಚ್ಚಿನ ಭದ್ರತೆಗೆ ಸೂಚನೆ

ಬೆಳಗಾವಿ: ಕೊರೊನ ಮೂರನೇ ಅಲೆ ಹಿನ್ನಲೆಯಲ್ಲಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಸೂಚಿಸಿರುವ ಹಿನ್ನಲೆಯಲ್ಲಿ ಇಂದು ಬೆಳಗಾವಿ ಕೋನಗೊಳಿ ಚೆಕ್ ಪೋಸ್ಟ್ ಗೆ ರಾಜ್ಯ ಪೊಲೀಸ್ ಇಲಾಖೆಯ ಎಡಿಜಿಪಿ ಉಮೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೋನಗೊಳಿ ಸೇರಿದಂತೆ ಅನೇಕ ಚೆಕ್ ಪೋಸ್ಟ್ ಗಳ ಕಾರ್ಯವೈಖರಿ ಬಗ್ಗೆ ಮಾಹಿತಿ ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಾತನಾಡಿದ adgp ಉಮೇಶ್ ಕುಮಾರ್ ಮಾತನಾಡಿದರು

ಸದ್ಯ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಆರ್​ಟಿಪಿಸಿಆರ್ ವರದಿ ಕಡ್ಡಾಯ ಮಾಡಲಾಗಿದ್ದು, ಕೋವಿಡ್ ನೆಗಟಿವ್ ರಿಪೋರ್ಟ್ ಇಲ್ಲದವರನ್ನ ವಾಪಸ್ಸು ಕೂಡ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಬೆಳಗಾವಿ ಜಿಲ್ಲಾಡಳಿತದ ಕಾರ್ಯ ಚನ್ನಾಗಿದೆ, ಬಾರ್ಡರ್ ಏರಿಯಾದಲ್ಲಿ ಫೋಕಸ್ ಮಾಡುವಂತೆ ಸಲಹೆ ನೀಡಿದ್ದೇನೆ, 22 ಚೆಕ್ ಪೋಸ್ಟ್ ಗಳನ್ನ ಗುರುತಿಸಲಾಗಿದ್ದು ಹೆಚ್ಚಿನ ನಿಗಾ ವಹಿಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ, ಹೆಚ್ಚುವರಿ ಸಿಬ್ಬಂದಿಯನ್ನು ಕೂಡ ನಿಯೋಜನೆ ಮಾಡಲಾಗಿದೆ, ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಪೊಲೀಸ್ ಇಲಾಖೆಯೊಂದಿಗೆ ಉತ್ತಮ ಸಂಯೋಜನೆ ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ

ಇನ್ನು ರಾಜ್ಯ ಪೊಲೀಸ್ ಇಲಾಖೆ ಬೆಳಗಾವಿ ಜಿಲ್ಲೆ ಹಾಗೂ ನಗರದ ಜನತೆಗೆ ಮನವಿ ಮಾಡಿಕೊಳ್ಳುತ್ತೇ,ಎಲ್ಲರೂ ಮನೆಯಲ್ಲಿ ಮುಂಜಾಗ್ರತಾ ಕೈಗೊಳ್ಳಬೇಕು,ಭಯ ಪಡುವ ಅಗತ್ಯವಿಲ್ಲಾ,ಮಾಸ್ಕ್ ಬಳಸಿ ಸಾಮಾಜಿಕ ಅಂತರ ಕಾಪಾಡುಕೊಳ್ಳಿ ಎಂದು ಹೇಳಿದ್ದಾರೆ

ಇನ್ನು ಕೆಲವು ಕಾರ್ಮಿಕರು ದಿನನಿತ್ಯದ ಓಡಾಟ ನಡೆಸುತ್ತಿದ್ದಾರೆ ಅಂತಹ ಕಾರ್ಮಿಕರನ್ನ ಗುರುತಿಸಿ ಅವರಿಗೆ ಜಿಲ್ಲಾಧಿಕಾರಿಗಳು ಪಾಸ್ ನೀಡುವ ವ್ಯವಸ್ಥೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಉಮೇಶ್ ಕುಮಾರ್ ಭೇಟಿ ನಂತರ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಕೊರೊನಾ ಮಾರ್ಗಸೂಚಿಗಳನ್ನ ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯಪ್ರವತ್ತವಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button