Breaking NewsLatestಜಿಲ್ಲಾ ಸುದ್ದಿರಾಜಕೀಯರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ

ಬಿಜೆಪಿಗೆ ಜನರ ಕಷ್ಟಕ್ಕಿಂತ ಅಧಿಕಾರವೇ ಮುಖ್ಯ: ರಣದೀಪ್ ಸುರ್ಜೇವಾಲಾ ವಾಗ್ದಾಳಿ

ಧಾರವಾಡ : ರಾಜ್ಯದ ಅಕ್ಕಪಕ್ಕದ ರಾಜ್ಯಗಳಲ್ಲಿ ‌ಕೊರೊನಾ ಮಾಹಾಮಾರಿ‌ ವೈರಸ್ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿದೆ. ಇಂತಹ‌ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಬರಬೇಕಿದ್ದ ರಾಜ್ಯ, ಕೇಂದ್ರ ಸರ್ಕಾರಗಳಿಗೆ ಅಧಿಕಾರವೇ ಮುಖ್ಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್​​​​ ಸುರ್ಜೆವಾಲಾ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರು ಅಧಿಕಾರಕ್ಕಾಗಿ ದೆಹಲಿಗೆ ದೌಡಾಯಿಸ್ತಾರೇ ಹೊರತು ಜನರ ಸಂಕಷ್ಟ ನಿವಾರಣೆಗಾಗಿ ಅಲ್ಲ. ಬಿಜೆಪಿ ಪಾರ್ಟಿ ಇದೊಂದು ಭ್ರಷ್ಟಾಚಾರ ಪಾರ್ಟಿಯಾಗಿದೆ. RTGS ಮೂಲಕ ಭೃಷ್ಟಾಚಾರವನ್ನು ಬಿಜೆಪಿ ಮಾಡುತ್ತಿದೆ. ರಾಜ್ಯ ಬಿಜೆಪಿ ನಾಯಕರಿಗೆ ರಾಜಕೀಯವೇ ಮುಖ್ಯವಾಗಿದೆ. ಸಂಪುಟ ಸೇರಲು ಒಬ್ಬರಿಗಿಂತ ಒಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಬಿಜೆಪಿ‌ ಶಾಸಕರುಗಳು ಜನರಿಗೆ ಮಹತ್ವ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸುದರು.

ಯಡಿಯೂರಪ್ಪರದ್ದು ಭ್ರಷ್ಟಾಚಾರ ಸರ್ಕಾರ ಆಗಿತ್ತು

ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಭ್ರಷ್ಟಾಚಾರ ಜಾಸ್ತಿ ಆಗಿದೆ. ಸರ್ಕಾರ ಗೂಡಾಚಾರ ಮಾಡ್ತಾ ಇದೆ. ಭ್ರಷ್ಟಾಚಾರ, ಪಕ್ಷಾಂತರ, ಬೇಹುಗಾರಿಕೆ ಮೂಲಕ ಸರ್ಕಾರ ಅಸ್ತತ್ವಕ್ಕೆ ಬಂದಿದೆ. ಯಡಿಯೂರಪ್ಪನವರ ಈ ಹಿಂದೆ ಮುಖ್ಯಮಂತ್ರಿ ಇದ್ದಾಗ ಆರ್ ಟಿಜಿಎಸ್ ಮೂಲಕ ಲಂಚ ಕೊಲ್ಕತ್ತಾದಿಂದ ತಮ್ಮ ಇಬ್ಬರು ಮಕ್ಕಳ‌‌‌ ಮೂಲಕ ಲಂಚದ ಹಣ ಪಡೆದುಕೊಂಡಿದ್ದಾರೆ‌‌ ಎಂದು ಗಂಭೀರ ಆರೋಪ‌ ಮಾಡಿದರು.

ಸಿಎಂ ಬದಲಾದರೂ ಸರ್ಕಾರದ ಸ್ವಭಾವ ಬದಲಾಗಿಲ್ಲ.

ಸಧ್ಯ ರಾಜ್ಯದಲ್ಲಿ ಸಿಎಂ‌ ಬದಲಾವಣೆ ಆಗಿದೆ. ಆದರೆ ಸರ್ಕಾರದ ಸ್ವಭಾವ, ನೀತಿ ಮಾತ್ರ ಬದಲಾಗಿಲ್ಲ. ಸದ್ಯದ ಸಿಎಂ ರಬ್ಬರಸ್ಟಾಂಪ್ ಆಗಿದ್ದಾರೆ. ರಾಜ್ಯದಲ್ಲಿ ಪ್ರವಾಹ ಬಂದೂ ಸಾಕಷ್ಟು ಜನರು ಮನೆ, ಬೆಳೆ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಸಿಎಂ ಬದಲಾವಣೆ ಮಾಡಿದ್ದು, ರಬ್ಬರ್ ಸ್ಟ್ಯಾಂಪ್ ತರಹ ಮತ್ತೊಬ್ಬರನ್ನ ಸಿಎಂ ಆಗಿ ಈಗ ತಂದು ಕುರಿಸಿದ್ದಾರೆ. ವಿಪಕ್ಷವಾದ ಕಾಂಗ್ರೆಸ್ ಜನರ ನೆರವಿಗೆ ಬಂದ್ರೆ. ಬಿಜೆಪಿಯರು ಮಾತಚರ ಅಧಿಕಾರ, ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೆಹಲಿಗೆ ಓಡಾಟ ನಡೆಸುತ್ತಿದ್ದಾರೆ. ಕೊರೊನಾ ನಿರ್ವಹಣೆಯಲ್ಲೂ ಸರ್ಕಾರ ಸೋತಿದೆ. ಪ್ರವಾಹ ನಿರ್ವಹಣೆಯಲ್ಲೂ ಎರಡು ಸರ್ಕಾರಗಳು ವಿಫಲವಾಗಿವೆ ಎಂದು ಕೀಡಿಕಾರಿದರು.

Spread the love

Related Articles

Leave a Reply

Your email address will not be published. Required fields are marked *

Back to top button