ಭಟ್ಕಳದಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ಆಕ್ಸಿಜನ್ ಘಟಕಕ್ಕೆ ಗುದ್ದಲಿ ಪೂಜೆ

ಕಾರವಾರ : ಭಟ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊ ಳ್ಳುವ ಅಕ್ಸಿಜನ್ ಘಟಕದ ಕಟ್ಟಡದ ಗುದ್ದಲಿ ಪೂಜೆಯನ್ನು ಶುಕ್ರವಾರ ಶಾಸಕ ಸುನೀಲ್ ನಾಯ್ಕ ನೆರವೇರಿಸಿದರು.
ಈ ಸಂದರ್ಭದಲ್ಲಿ ಸುನೀಲ್ ನಾಯ್ಕ ಮಾತನಾಡಿ, ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಉಪಯೋಗವಾಗಲೆಂದು ಕೇಂದ್ರ ಸರಕಾರ ಹಾಗೂ ಓ.ಎನ್.ಜಿ.ಸಿ. ಸಹಯೋಗ ದೊಂದಿಗೆ ಈ ಆಮ್ಲಜನಕ ಘಟಕವನ್ನು ಸ್ಥಾಪಿಸಲಾಗಿದೆ. ರಾಜ್ಯದಲ್ಲಿ ಚಿಕ್ಕೋಡಿ ಮತ್ತು ಭಟ್ಕಳಕ್ಕೆ ಮಾತ್ರ ಈ ಆಮ್ಲಜನಕ ಜನರೇಟ್ ಪ್ಲಾಂಟ್ ಮಂಜೂರಿಯಾಗಿದೆ.ಈ ಆಮ್ಲಜನಕ ಘಟಕದ ಬಗ್ಗೆ ಸಂಸದ ಅನಂತ ಕುಮಾರ ಹೆಗಡೆ ಅವರಿಗೆ ಮನವಿ ಮಾಡಿದಾಗ ಅವರು ತಕ್ಷಣ ಸ್ಪಂದಿಸಿ ಕೇಂದ್ರದ ಅಧಿಕಾರಿ ಗಳೊಂದಿಗೆ ಮಾತನಾಡಿ ಈ ಘಟಕವನ್ನು ಮಂಜೂರಿಗೊಳಿ ಸಿದ್ದಾರೆ.ಇದಕ್ಕೆ ಜಿಲ್ಲಾ ಉಸ್ತು ವಾರಿ ಮಂತ್ರಿಗಳಾದ ಶಿವರಾಮ ಹೆಬ್ಬಾರ ಅವರೂ ಸಹ ಸಹಾಯ ಮಾಡಿದ್ದಾರೆ.ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯಲಿದೆ ಎಂದರಲ್ಲದೇ ಈ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಹಾಗೂ ಇತರ ವೈದ್ಯರ ತಂಡ ಸಹ ಉತ್ತಮ ರೀತಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದರು.
ಭಟ್ಕಳದಲ್ಲಿ ಸಿಟಿ ಸ್ಕ್ಯಾನ್ ಸೆಂಟರ್ ತೆರೆಯುವ ಬಗ್ಗೆಯೂ ಸಾರ್ವಜನಿಕರು ಬೇಡಿಕೆ ಇಟ್ಟಿದ್ದು,ಈ ಸಂಬಂಧ ನಾನು ಆರೋಗ್ಯ ಸಚಿವರಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂ ದಿಗೆ ಮಾತನಾಡಿ ಶಿಫಾರಸ್ಸು ಕಳುಹಿಸಿದ್ದೇನೆ.ಅವರು ಶೀಘ್ರದಲ್ಲಿಯೇ ಸಿ.ಟಿ.ಸ್ಕ್ಯಾನ್ ಸೆಂಟರ್ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರಲ್ಲದೇ,ಇಲ್ಲಿನ ಬಂದರ್ ರಸ್ತೆಯಲ್ಲಿಯ ಹಿಂದೂ ರುಧ್ರಭೂಮಿಯ ಅಭಿವೃದ್ದಿಗೆ ತಕ್ಷಣ ಹಣ ಬಿಡುಗಡೆ ಮಾಡಿ ಕಾಮಗಾರಿ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಮತಾರಾವ್,ಡಿ.ಎಸ್.ಪಿ. ಕೆ.ಯು.ಬೆಳ್ಳಿಯಪ್ಪ,ತಾಲೂಕು ಪಂಚಾಯತ ಕಾರ್ಯನಿರ್ವಹ ಣಾಧಿಕಾರಿ ವಿರೇಂದ್ರ ಬಾಡ್ಕರ, ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್,ರಾಮದಾಸ್ ಪ್ರಭು,ಜಿಲ್ಲಾ ಬಿ.ಜೆ.ಪಿ. ಉಪಾದ್ಯಕ್ಷ ಗೋವಿಂದ ನಾಯ್ಕ,ಬಿ.ಜೆ.ಪಿ. ತಾಲೂಕಾ ಧ್ಯಕ್ಷ ಸುಬ್ರಾಯದೇವಾಡಿಗ, ರಾಜೇಶ ನಾಯ್ಕ,ಶ್ರೀಕಾಂತ ನಾಯ್ಕ,ಪಾಂಡು ನಾಯ್ಕ, ಮಹೇಶ ಖಾರ್ವಿ,ಮತ್ತಿತರರು ಇದ್ದರು.




