ಆರೋಗ್ಯಲೈಫ್ ಸ್ಟೈಲ್

ಮಧುಮೇಹಿಗಳು ಹಾಲಿಗೆ ಇವುಗಳನ್ನು ಬೆರೆಸಿ ಕುಡಿಯುವುದು ಒಳ್ಳೆಯದು

ಪವಿತ್ರಾ ಶೆಟ್ಟಿ

ದೇಹದ ರಕ್ತದಲ್ಲಿ ಗ್ಲುಕೋಸ್ ಮಟ್ಟ ಹೆಚ್ಚಾದಂತೆ ಮಧುಮೇಹ ಸಮಸ್ಯೆ ಕಂಡುಬರುತ್ತದೆ. ಇದರ ನಿಯಂತ್ರಣಕ್ಕೆ ಔಷಧಿಗಳು ಅನಿವಾರ್ಯವಾದರೂ ಈ ಕೆಲವು ವಸ್ತುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ಮನೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ರಾತ್ರಿ ಹಾಲಿಗೆ ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ಇದರಿಂದ ನಿಮಗೆ ಕ್ಯಾಲ್ಸಿಯಂ ಪೊಟ್ಯಾಶಿಯಂ ಮತ್ತು ವಿಟಮಿನ್ ಗಳು ದೊರೆಯುತ್ತದೆ. ಜೊತೆಗೆ ರಕ್ತದ ಸಕ್ಕರೆಯ ಪ್ರಮಾಣವು ಕಡಿಮೆಯಾಗುತ್ತದೆ. ದಾಲ್ಚಿನ್ನಿ ಬೆರೆಸಿದ ಹಾಲಿನ ಸೇವನೆಯಿಂದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.

ಇನ್ನು ಮಧುಮೇಹಿಗಳು ಬಾದಾಮಿ ಹಾಲನ್ನು ನಿಯಮಿತವಾಗಿ ಕುಡಿಯುತ್ತಿರುವುದು ಒಳ್ಳೆಯದು. ಇದರಲ್ಲಿ ಕ್ಯಾಲೋರಿ ಪ್ರಮಾಣ ಕಡಿಮೆ ಇದ್ದು ವಿಟಮಿನ್ ಡಿ, ಈ ಮತ್ತು ಅಗತ್ಯ ಪೋಷಕಾಂಶಗಳಿವೆ. ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಕೂಡ ಇದ್ದು ಇದು ರಕ್ತ ಗ್ಲೂಕೋಸ್ ಅನ್ನು ತ್ವರಿತವಾಗಿ ಹೀರಿಕೊಳ್ಳಲು ಅನುಮತಿ ನೀಡುವುದಿಲ್ಲ. ಅದೇ ರೀತಿ ಅರಿಶಿನ ಹಾಲನ್ನು ಕುಡಿಯುವುದರಿಂದ ಹಲವು ಸಮಸ್ಯೆಗಳನ್ನು ದೂರ ಮಾಡಬಹುದು. ರಾತ್ರಿ ಉತ್ತಮ ನಿದ್ದೆ ಪಡೆಯಲು ಅರಸಿನ ಹಾಲನ್ನು ನಿತ್ಯ ಸೇವಿಸಿ.

Spread the love

Related Articles

Leave a Reply

Your email address will not be published. Required fields are marked *

Back to top button