ಫ್ಯಾಷನ್ಮನರಂಜನೆಲೈಫ್ ಸ್ಟೈಲ್ಸೆಲೆಬ್ರಿಟಿ
ನಟಿ ಅನುಷ್ಕಾ ಧರಿಸಿದ ಕಪ್ಪು ಎಲ್ಟಿ ಬ್ಯಾಗ್ ಬೆಲೆ ಎಷ್ಟು ಗೊತ್ತಾ?

ಸೆಲೆಬ್ರಿಟಿಗಳ ಜೀವನಶೈಲಿಯು ಅಭಿಮಾನಿಗಳಿಗೆ ಯಾವಾಗಲೂ ಆಸಕ್ತಿದಾಯಕ ವಿಷಯವಾಗಿದೆ. ಅವರ ಐಷರಾಮಿ ಮನೆಗಳಿಂದ, ದುಬಾರಿ ಬ್ಯಾಗ್ ಗಳು, ದುಬಾರಿ ಬಟ್ಟೆಗಳು ಎಲ್ಲವನ್ನೂ ಪರಿಶೀಲಿಸುತ್ತಾರೆ. ಅದೇ ರೀತಿ ಇದೀಗ ನಟಿ ಅನುಷ್ಕಾ ಶರ್ಮಾ ಅವರ ಬ್ಯಾಗ್ ಮೇಲೆ ಎಲ್ಲರ ಗಮನ ಸೆಳೆದಿದೆ.
ಸದ್ಯ ನಟಿ ಅನುಷ್ಕಾ ಅವರು ತನ್ನ ಪತಿ ವಿರಾಟ್ ಕೊಹ್ಲಿ ಮತ್ತು ಮಗಳು ವಮಿಕಾ ಅವರೊಂದಿಗೆ ಇಂಗ್ಲೆಂಡ್ ನಲ್ಲಿದ್ದಾರೆ. ಇತ್ತೀಚೆಗೆ ನಟಿ ತನ್ನ ಗೆಳತಿ ಅಥಿಯಾ ಶೆಟ್ಟಿ ಅವರೊಂದಿಗೆ ಸುತ್ತಾಡಲು ಹೋಗಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಪೋಟೊದಲ್ಲಿ ನಟಿ ಅನುಷ್ಕಾ ಅವರು ಧರಿಸಿದ ಕಪ್ಪು ಎಲ್ಟಿ ಬ್ಯಾಗ್ ಮೇಲೆ ಎಲ್ಲರ ಗಮನ ಹೋಗಿದ್ದು, ಎಲ್ಟಿ ವೆಬ್ ಸೈಟ್ ನಲ್ಲಿ ಈ ಬ್ಯಾಗ್ ನ ಬೆಲೆ 2,71,773 ರೂ ಗಳಾಗಿದೆಯಂತೆ. ಅಲ್ಲದೇ ಅನುಷ್ಕಾ ಧರಿಸಿದ ಟ್ರೆಂಡಿ ವೈಟ್ ಜಾಕೆಟ್ ಬೆಲೆ 50 ಸಾವಿರ ರೂಗಳು ಎನ್ನಲಾಗಿದೆ




