Breaking NewsLatest
ಬಿಎಸ್ವೈ ರಾಜೀನಾಮೆಯಿಂದ ಮನನೊಂದು ಅಭಿಮಾನಿ ನೇಣಿಗೆ ಶರಣು

ಮೈಸೂರು : ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಕೊಟ್ಟಿದ್ದಕ್ಕೆ ಮನನೊಂದ ಬಿಎಸ್ವೈ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಬೊಮ್ಮಾಲಾಪುರ ದಲ್ಲಿ ಜರುಗಿದೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.
ರವಿ (35) ಮೃತ ದುರ್ದೈವಿ. ರವಿ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಯಡಿಯೂರಪ್ಪನವರ ಅಪ್ಪಟ ಅಭಿಮಾನಿ. ನಿನ್ನೆ ಸಿಎಂ ಸ್ಥಾನಕ್ಕೆ ಬಿಎಸ್ವೈ ರಾಜೀನಾಮೆ ಕೊಡುತ್ತಿದ್ದಂತೆ ಮಂಕಾಗಿದ್ದ.
ರಾಜೀನಾಮೆ ಘೋಷಣೆಯ ವಿಡಿಯೋವನ್ನು ಪದೇಪದೆ ನೋಡಿದ ರವಿ, ಯಡಿಯೂರಪ್ಪ ಅವರು ಕಣ್ಣೀರು ಸುರಿಸಿದ್ದು ಬೇಸರ ತಂದಿದೆ ಎಂದು ಗ್ರಾಮದ ಗುರುಸ್ವಾಮಿ ಬಳಿ ಹೇಳಿಕೊಂಡಿದ್ದ. ರಾತ್ರಿವರೆಗೂ ಇದೇ ಬೇಸರದಲ್ಲಿದ್ದ. ಬೆಳಗ್ಗೆ ಅವನ ಕ್ಯಾಂಟೀನ್ ಬಳಿಗೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
