
ಬಿ ಎಸ್ ಯಡಿಯೂರಪ್ಪ ಕರ್ನಾಟಕ ಕಂಡ ಅತಿ ಭಷ್ಟ ಮುಖ್ಯಮಂತ್ರಿ ಎಂದು ಹೇಳಲು ಹಿಂಜರಿಕೆ ಬೇಕಿಲ್ಲ.. ಈ ಕಾರಣದಿಂದ ಅವರು ಅಧಿಕಾರ ತ್ಯಜಿಸಬೇಕು.. ಆದರೆ… ಪಕ್ಷದ ವರಿಷ್ಠರು ಅವರನ್ನು ನಡೆಸಿಕೊಂಡ ರೀತಿ ಯಾರಿಗೂ ಗೌರವ ತರುವಂತಹುದಲ್ಲ… ಕರ್ನಾಟಕ ಮುಖ್ಯಮಂತ್ರಿಯನ್ನು ಜೀತದಾಳಿನಂತೆ ನಡೆಸಿಕೊಳ್ಳಲಾಗುತ್ತಿದೆ,, ಇದು ಜನತಂತ್ರಕ್ಕೆ ಮಾಡುವ ಅವಮಾನ,, ದೆಹಲಿಯ ನಾಯಕರು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಹಿಂಸೆ ನೀಡಿದ ದೊಡ್ಡ ಪಟ್ಟಿಯೇ ಇದೆ,,, ದೇವರಾಜ್ ಅರಸು, ಎಸ್. ಬಂಗಾರಪ್ಪ, ವೀರೇಂದ್ರ ಪಾಟೀಲ್, ಹೀಗೆ ಹಲವರು,, ಇವರ ಪಟ್ಟಿಗೆ ಈಗ ಯಡಿಯೂರಪ್ಪ ಸೇರ್ಪಡೆಯಾಗಿದ್ದಾರೆ..ಅದರೆ ಈ ಮೊದಲು ಹೆಸರಿಸಿದ ಮಾಜಿ ಮುಖ್ಯಮಂತ್ರಿಗಳಂತೆ ಜನಪರ ಕೆಲಸಗಳನ್ನು ಯಡಿಯೂರಪ್ಪ ಮಾಡಿಲ್ಲ,, ಅವರದೇನಿದ್ದರೂ ಪಕ್ಷದ ನೀತಿಯಂತೆ ಧರ್ಮ ಕಾರಣ.. ಶಶಿಧರ್ ಭಟ್ ಸುದ್ದಿ ವಿಶ್ಲೇಷಣೆ



