
ನಿರ್ದೇಶಕ, ನಿರ್ಮಾಪಕ ಗುರುದೇಶಪಾಂಡೆ ಅವರಿಗೆ ಹುಟ್ಟುಹಬ್ಬದ ಸಂಭ್ರಮ ಈ ಶುಭ ಸಂದರ್ಭದಲ್ಲಿ ಹೊಸ ಸಿನಿಮಾ ಘೋಷಿಸಿದ್ದಾರೆ. ತಮ್ಮ ನೂತನ ಸಿನಿಮಾಗೆ ಝೂ ಎಂದು ಹೆಸರಿಟ್ಟಿದ್ದಾರೆ. ಝೂ- ಕೇರ್ ಆಫ್ ದಿ ಬಾಸ್ ಎಂಬ ಅಡಿಬರಹವೂ ಚಿತ್ರದಲ್ಲಿದೆ. ಇದನ್ನು ಗಮನಿಸಿದರೆ ಈ ಚಿತ್ರವನ್ನು ದರ್ಶನ್ ಅವರಿಗಾಗಿಯೆ ಅರ್ಪಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಚಿತ್ರದ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಇದರಲ್ಲಿ ದರ್ಶನ್ ಅವರಿಂದ ಪ್ರೇರಿತರಾದ ಬಾಲಕನೊಬ್ಬನ ಯಶೋಗಾಥೆ ಚಿತ್ರದಲ್ಲಿರುವುದು ಖಚಿತವಾಗುತ್ತದೆ.
ಈ ಚಿತ್ರವನ್ನು ಗುರುದೇಶಪಾಂಡೆ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಉಳಿದಂತೆ ಚಿತ್ರದ ತಾರಾಬಳಗದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.




