Breaking Newsಮನರಂಜನೆಸಿನಿಮಾಸೆಲೆಬ್ರಿಟಿ
ಅಂಗರಕ್ಷಕನ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಎಲ್ಲರನ್ನೂ ಪ್ರೀತಿಯಿಂದ ಕಾಣುವ ನಟ ಅದಕ್ಕಾಗಿಯೇ ಸುದೀಪ್ ಅವರನ್ನು ಅಪಾರ ಅಭಿಮಾನಿಗಳು ಆರಾಧಿಸುತ್ತಾರೆ. ಈಗ ಸುದೀಪ್ ತಮ್ಮ ಅಂಗರಕ್ಷಕ ಸಾಯಿಕೃಷ್ಣ ಅವರ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ.
ಸಾಯಿಕೃಷ್ಣ ಅವರಿಗೆ ತಾವೇ ಸ್ವತಃ ಬಿರಿಯಾನಿ ಮಾಡಿ ಬಡಿಸಿದ್ದಾರೆ. ಜತೆಗೆ ಸಾಯಿ ಕೃಷ್ಣ ಅವರ ಮನೆಯವರಿಗೂ ಕಳುಹಿಸಿಕೊಟ್ಟಿದ್ದಾರೆ.
ಸಂತಸದಿಂದಲೇ ಬಿರಿಯಾನಿ ಸವಿದ ಸಾಯಿಕೃಷ್ಣ ಸುದೀಪ್ ಅವರು ಇಷ್ಟು ಚೆನ್ನಾಗಿ ಬಿರಿಯಾನಿ ಮಾಡುತ್ತಾರೆ ಎಂದು ಗೊತ್ತಿರಲಿಲ್ಲ. ಅವರ ಕೈ ರುಚಿ ಸವಿದ ನಾನೇ ಧನ್ಯ ಎಂದಿದ್ದಾರೆ
