ಅಂಕೋಲಾದಲ್ಲಿ ನೋಡ ನೋಡುತ್ತಿದ್ದಂತೆ ಧರೆಗುರುಳಿದ ಮನೆ

ಕಾರವಾರ : ಗಂಗಾವಳಿ ನದಿ ಪ್ರವಾಹದಿಂದ ತಡರಾತ್ರಿಯೇ ಮನೆಗಳಿಗೆ ನೀರು ನುಗ್ಗಿದೆ. ಇಂದು ಕೂಡ ಮಳೆಯ ಕಾರಣ ಮಣ್ಣಿನ ಗೋಡೆ ನೆನೆದಿತ್ತು.ಇಂದು ಮಧ್ಯಾಹ್ನದ ಬಳಿಕ ಮನೆಯವರ ಎದುರೇ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ
ನೆರೆ ಪ್ರವಾಹದಿಂದಾಗಿ ತಡರಾತ್ರಿಯಿಂದ ಮುಳುಗಡೆಯಾಗಿದ್ದ ಮಣ್ಣಿನ ಮನೆಯೊಂದು ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದಿದೆ.ಅಂಕೋಲಾ ಹಿಚ್ಕಡ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗಂಗಾವಳಿ ನದಿ ಪ್ರವಾಹದಿಂದ ತಡರಾತ್ರಿಯೇ ಮನೆಗಳಿಗೆ ನೀರು ನುಗ್ಗಿದೆ.ಇಂದು ಕೂಡ ಮಳೆಯ ಕಾರಣ ಮಣ್ಣಿನ ಗೋಡೆ ನೆನೆದಿತ್ತು. ಇಂದು ಮಧ್ಯಾಹ್ನದ ಬಳಿಕ ಮನೆಯವರ ಎದುರೇ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಹಿಚ್ಕಡದ ಜಿ.ವಿ.ನಾಯಕ ಎಂಬವರ ಮನೆ ಇದಾಗಿದ್ದು, ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.ಇನ್ನು ಹಿಚ್ಕಡ ಗ್ರಾಮ ಬಹುತೇಕ ನೆರೆಯಿಂದ ಜಲಾವೃತಗೊಂಡಿದೆ. 50 ಕ್ಕೂ ಹೆಚ್ಚು ಮನೆಗಳು ಭಾಗಶಃ ಮುಳುಗಡೆಯಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ಈ ಭಾಗದ ಸ್ಥಳೀಯರನ್ನು ಸ್ಥಳಾಂತರ ಮಾಡಲಾಗಿದ್ದು,ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
