ಬಾಗಲಕೋಟೆಯ ತ್ರಿವಳಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ; ಜಿಲ್ಲಾಡಳಿತ ಎಚ್ಚರಿಕೆ

ಬಾಗಲಕೋಟೆ: ಮಹಾರಾಷ್ಟ್ರ ಬೆಳಗಾವಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಬಾಗಲಕೋಟೆ ಜಿಲ್ಲೆಯ ತ್ರಿವಳಿ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ..
ಬಾಗಲಕೋಟೆ ಜಿಲ್ಲೆಯ ಘಟಪ್ರಭಾ, ಮಲಪ್ರಭಾ ಹಾಗೂ ಕೃಷ್ಣಾ ನದಿ ಪಾತ್ರದ ಜನತೆಯಲ್ಲಿ ಪ್ರವಾಹ ಭೀತಿ ಶುರುವಾಗಿದೆ.ಇನ್ನು ಮಲಪ್ರಭಾ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದು,ಬಾದಾಮಿ, ಹುನಗುಂದ ತಹಶೀಲ್ದಾರ್ ಗೆ ಪತ್ರದ ಮುಖಾಂತರ ಜಿಲ್ಲಾಧಿಕಾರಿ ಕೆ.ರಾಜೇಂದ್ರ ಸೂಚನೆ ನೀಡಿದ್ದಾರೆ.
KNNL, MLBCC ವೃತ್ತ ನವಿಲುತೀರ್ಥ ಅಭಿಯಂತರರಿಂದ ಬಾಗಲಕೋಟೆ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದ್ದು,ಯಾವುದೇ ಕ್ಷಣದಲ್ಲಿ ನವಿಲುತೀರ್ಥ ಡ್ಯಾಮ್ ನಿಂದ ನೀರು ಹೊರಬಿಡುವ ಸಾಧ್ಯತೆಯಿದೆ.ಹೀಗಾಗಿ ಜಿಲ್ಲಾಧಿಕಾರಿಯಿಂದ ಬಾದಾಮಿ, ಹುನಗುಂದ ತಾಲೂಕಿನ ಮಲಪ್ರಭಾ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತರಳಲು ಸೂಚನೆ ನೀಡಿದ್ದಾರೆ.
ಇನ್ನೊಂದೆಡೆ ಅಪಾಯ ಮಟ್ಟ ಮೀರಿ ಘಟಪ್ರಭಾ, ಕೃಷ್ಣಾ ನದಿ ಹರಿಯುತ್ತಿದೆ .ಡವಳೇಶ್ವರ ಗ್ರಾಮದ ಬಳಿಯ ಘಟಪ್ರಭಾ ಸೇತುವೆ ಜಲಾವೃತವಾಗಿ ಸಂಪರ್ಕ ಬಂದ್ ಆಗಿದೆ. ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲ್ಲೂಕಿನ ಢವಳೇಶ್ವರ ಗ್ರಾಮದಿಂದ ಬೆಳಗಾವಿ ಜಿಲ್ಲೆ ಮೂಢಲಗಿ ತಾಲ್ಲೂಕಿನ ಡವಳೇಶ್ವರ ಸೇರಿದಂತೆ ಹತ್ತಾರು ಹಳ್ಳಿಗೆ ಸಂಪರ್ಕದ ಸೇತುವೆ ಇದಾಗಿದ್ದು.ಸೇತುವೆ ಜಲಾವೃತ ಹಿನ್ನೆಲೆ ಡವಳೇಶ್ವರ ಹಾಗೂ ಮೂಡಲಗಿ ಭಾಗದ ಹಳ್ಳಿಗಳ ಸಂಪರ್ಕ ಕಡಿತವಾಗಿದೆ.ಸೇತುವೆ ಮೇಲೆ ಸ್ಥಳೀಯರು ಬೈಕ್ ತೊಳೆಯುತ್ತಿದ್ದು.ನದಿ ಅಕ್ಕಪಕ್ಕದ ನೂರಾರು ಎಕರೆ ಕಬ್ಬು ಬೆಳೆ ಜಲಾವೃತವಾಗಿದೆ.




