
ಹೊಸದಿಲ್ಲಿ: ಕೋವಿಡ್ ಸೋಂಕಿನ ಪಾಸಿಟಿವಿಟಿ ಅನೇಕ ರಾಜ್ಯಗಳಲ್ಲಿ ಏರಿಕೆಯಾಗತೊಡಗಿದ್ದು, ಕಠಿಣ ಕ್ರಮ ಜರುಗಿಸದಿದ್ದರೆ ಮೂರನೇ ಅಲೆ ಮತ್ತಷ್ಟು ಆತಂಕಕಾರಿಯಾಗಿ ವ್ಯಾಪಿಸುವ ಸಾಧ್ಯತೆ ಎದುರಾಗಿದೆ.
ರಾಜಸ್ಥಾನ, ಕೇರಳ, ಮಿಜೋರಾಂ, ಮಣಿಪುರ, ಮೇಘಾಲಯ ರಾಜ್ಯಗಳಲ್ಲಿ ಹಲವು ಜಿಲ್ಲೆಗಳಲ್ಲಿ, ಕಳೆದೊಂದು ವಾರದಲ್ಲಿ ಪಾಸಿಟಿವಿಟಿ ಶೇ.10ಕ್ಕಿಂತ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲೂ ಪ್ರಕರಣಗಳು ಅಧಿಕವಾಗುತ್ತಿವೆ. ದೇಶದ 47 ಜಿಲ್ಲೆಗಳಲ್ಲಿ ಶೇ.10ರಷ್ಟು ಪಾಸಿಟಿವಿಟಿ ಏರಿದ್ದರೆ, 55 ಜಿಲ್ಲೆಗಳಲ್ಲಿ ಶೇ.5 ಕ್ಕಿಂತ ಹೆಚ್ಚಾಗಿದೆ.
ಹೀಗಾಗಿ ಈ ರಾಜ್ಯಗಳು ನಿಯಂತ್ರಣ ಕ್ರಮಗಳನ್ನು ಕೈಬಿಡದೆ, ಇನ್ನಷ್ಟು ಕಠಿಣಗೊಳಿಸಬೇಕು. ಆರ್ ಟಿ ಎ ಪರೀಕ್ಷೆ ಹಾಗೂ ಆರ್ ಟಿ ಪಿ ಸಿ ಆರ್ ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.



