ಚಿಕ್ಕಮಗಳೂರು
ಮಳೆ; ರೆಸ್ಟೋರೆಂಟಿಗೆ ನುಗ್ಗಿದ ಜಿಂಕೆ!

ಚಿಕ್ಕಮಗಳೂರು: ಕಾಡಿನಿಂದ ಹೊರಬಂದಿದ್ದ ಜಿಂಕೆಯೊಂದು ಮಳೆಯ ಹೊಡೆತ ತಡೆಯಲಾಗದೆ ರೆಸ್ಟೋರೆಂಟಿಗೆ ನುಗ್ಗಿದ ಘಟನೆ ಕಳಸದಲ್ಲಿ ನಡೆದಿದೆ.
ಆಶೀರ್ವಾದ ಎನ್ನುವ ರೆಸ್ಟೋರೆಂಟಿನ ಒಳಗೆ ನುಗ್ಗಿ ಅಲ್ಲಿದ್ದವರನ್ನು ಕೆಲಕಾಲ ಹುಬ್ಬೇರುವಂತೆ ಮಾಡಿದೆ. ಜನರು ಕುತೂಹಲದಿಂದ ಜಿಂಕೆಯನ್ನು ನೋಡಲು ಬಂದಾಗ ಜಿಂಕೆ ಹೊರಬಾರದೆ ಅಲ್ಲೇ ಟಿಕಾಣಿ ಹೂಡಿತ್ತು.
ಮಾಲೀಕ ರವಿ ರೈ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಜಿಂಕೆಯನ್ನು ತಪ್ಪಿಸಿಕೊಳ್ಳದಂತೆ ಕಟ್ಟಿಹಾಕಿ ವಾಹನದಲ್ಲಿ ಕೊಂಡೊಯ್ದು ಅರಣ್ಯಕ್ಕೆ ಬಿಟ್ಟಿದ್ದಾರೆ.




