Breaking Newsಕಲಬುರ್ಗಿಜಿಲ್ಲಾ ಸುದ್ದಿ

ಕಲಬುರ್ಗಿ: ನಿರ್ಮಾಣದವಾದ್ರೂ ಉದ್ಘಾಟನೆ ಭಾಗ್ಯ ಕಾಣದ ತರಬೇತಿ ಕೇಂದ್ರ

ಕಲಬುರ್ಗಿ: ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ಸಿಬ್ಬಂದಿಗಳ ತರಬೇತಿಗಾಗಿ ನಿರ್ಮಾಣವಾದ ಅಚ್ಚುಕಟ್ಟಾದ ಕಟ್ಟಡವಿದು. 8 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿ ಮೂರು ವರ್ಷಗಳು ಗತಿಸಿವೆ. ವಿಪರ್ಯಾಸ ಅಂದರೆ ಮೂರು ವರ್ಷ ಉರುಳಿದ್ರು ಇನ್ನೂ ಕಟ್ಟಡಕ್ಕೆ ಉದ್ಘಾಟನೆ ಭ್ಯಾಗ್ಯ ಮಾತ್ರ ದೊರೆತಿಲ್ಲ.

ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯತಿಯಿಂದ ಆಯ್ಕೆಯಾಗಿ ಬರುವ ನೂತನ ಸದಸ್ಯರಿಗೆ ತಮ್ಮ ತಮ್ಮ ಜವಾಬ್ದಾರಿ, ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳ ಕುರಿತು ತರಬೇತಿ ನೀಡುವ ಸದುದ್ದೇಶದಿಂದ ಕಲಬುರಗಿ ಹೊರವಲಯದ ಕೆಸರಟಗಿ ಬಳಿ ಟ್ರೇನಿಂಗ್ ಸೇಂಟರ್ ನಿರ್ಮಾಣ ಮಾಡಲಾಗಿದೆ. ನಿಜಕ್ಕೂ ಒಳ್ಳೆಯ ಉದ್ದೇಶದಿಂದ ನಿರ್ಮಿಸಿರುವ ಈ ಕಟ್ಟಡ ಉದ್ಘಾಟನೆ ಆಗಿದಿದ್ರೆ, ಚುನಾಯಿತ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಹಾಗೂ ಅಧಿಕಾರಿ, ಸಿಬ್ಬಂದಿಗೆ ಈ ಕಟ್ಟಡದಲ್ಲಿ ಟ್ರೇನಿಂಗ್ ದೊರೆಯುತ್ತಿತ್ತು. ಆದ್ರೆ ಕಟ್ಟಡ ನಿರ್ಮಾಣಗೊಂಡು ಬರೋಬ್ಬರಿ 3 ವರ್ಷಗಳು ಉರುಳಿದ್ರು ಉದ್ಘಾಟನೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಹೀಗಾಗಿ ಭವ್ಯ ಕಟ್ಟಡ ಬಳಕೆ ಆಗದೆ ಅನಾಥವಾಗಿದೆ.

ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿರುವ ಈ ಕಟ್ಟಡ ಉದ್ಘಾಟನೆ ಮಾಡುವಂತೆ ಕೆಸರಟಗಿ ಗ್ರಾಮಸ್ಥರು ಸಚಿವ ಕೆ ಎಸ್ ಈಶ್ವರಪ್ಪ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಅವರಿಗೂ ಹಲವಾರು ಬಾರಿ ಪತ್ರ ಬರೆದು ಮನವಿ ಮಾಡಿದ್ದಾರೆ. ಆದ್ರು ಈವರೆಗೂ ಕಟ್ಟಡ ಉದ್ಘಾಟನೆ ಮಾಡಿಲ್ಲ‌. ಈ ರೂರಲ್ ಡೆವಲಪ್ಮೆಂಟ್ ಟ್ರೇನಿಂಗ್ ಸೇಂಟರ್ ಉದ್ಘಾಟನೆ ಮಾಡಿದ್ರೆ, ನಮ್ಮೂರಿನ ಕೆಲವರಿಗೆ ಉದ್ಯೋಗ ದೊರೆಯುತ್ತೆ. ಕಟ್ಟಡ ಬಳಕೆ ಆಗದೆ ಪಾಳುಬಿದ್ದಂತಾಗಿದೆ. ಶೀಘ್ರದಲ್ಲಿ ಕಟ್ಟಡ ಉದ್ಘಾಟನೆ ಮಾಡುವಂತೆ ಕೆಸರಟಗಿ ಗ್ರಾಮಸ್ಥರು ಒತ್ತಾಯ ಮಾಡ್ತಿದ್ದಾರೆ.

ಶೀಘ್ರದಲ್ಲಿ ಉದ್ಘಾಟನೆ

ಕೆಆರ್ ಐಡಿಎಲ್ ನಿಂದ ಈ ಕಟ್ಟಡ ಕಾಮಗಾರಿ ಮಾಡಲಾಗಿದೆ‌. ಟ್ರೇನಿಂಗ್ ಸೇಂಟರ್ ಬಿಲ್ಡಿಂಗ್ ವರ್ಕ್ ಕಂಪ್ಲೀಟ್ ಆಗಿ ಮೂರು ವರ್ಷಗಳು ಕಳೆದ್ರು ಇನ್ನು ಜಿಲ್ಲಾ ಪಂಚಾಯತ್ ಗೆ ಹಸ್ತಾಂತರವೂ ಆಗಿಲ್ಲ, ಉದ್ಘಾಟನೆಯೂ ಆಗಿಲ್ಲ‌. ಹೀಗಾಗಿ ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿರುವ ಈ ಟ್ರೇನಿಂಗ್ ಸೇಂಟರ್ ಕಟ್ಟದ ನಿರುಪಯುಕ್ತ ಆದಂತಾಗಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿ ದಿಲೀಶ್ ಸಸಿ ಅವರನ್ನ ಕೇಳಿದ್ರೆ, ಶೀಘ್ರದಲ್ಲಿ ಕಟ್ಟಡ ಹಸ್ತಾಂತರ ಮಾಡಿಕೊಂಡು ಉದ್ಘಾಟನೆ ಮಾಡುವ ಭರವಸೆ ನೀಡ್ತಿದ್ದಾರೆ.

ಸ್ಟೇಟ್ ಇನ್ಸ್​ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್ಮೆಂಟ್ ಟ್ರೇನಿಂಗ್ ಸೇಂಟರ್ ಇಲ್ಲಿ ನಿರ್ಮಾಣ ಮಾಡಿರುವುದು ರಾಜದಲ್ಲಿಯೇ ಇದು ಎರಡನೇ ಕಟ್ಟಡ ಎನ್ನಲಾಗಿದೆ. ಡಿಸಿ, ಸಿಇಒ ಹಾಗೂ ಚುನಾಯಿತ ಜನಪ್ರತಿನಿಧಿಗಳು ಶೀಘ್ರದಲ್ಲಿ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ನೀಡಿ, ಟ್ರೇನಿಂಗ್ ಸೇಂಟರ್ ಆರಂಭಿಸುವತ್ತ ಗಮನ ಹರಿಸಬೇಕಿದೆ.

Spread the love

Related Articles

Leave a Reply

Your email address will not be published. Required fields are marked *

Back to top button