ಲೈಫ್ ಸ್ಟೈಲ್

ನಿಮ್ಮ ಸಾಕುಪ್ರಾಣಿಯ ಕಾಳಜಿ ನೀವೇ ಮಾಡಬಹುದು

ಪವಿತ್ರಾ ಶೆಟ್ಟಿ

ನಿಮ್ಮ ಮನೆಯ ಸಾಕು ಪ್ರಾಣಿಗಳಿಗೆ ಸಣ್ಣ ಗಾಯವಾಗಿದೆಯೇ? ಇದರಿಂದ ರಕ್ತಸ್ರಾವವಾಗುತ್ತಿದೆಯೇ? ತಕ್ಷಣ ನೀವು ಮಾಡಬೇಕಾದ್ದಿಷ್ಟೇ. ಮೊದಲು ರಕ್ತಸ್ರಾವವನ್ನು ನಿಯಂತ್ರಿಸಿ. ಗಾಯವಾದ ಜಾಗವನ್ನು ಸಣ್ಣ ಟವೆಲ್ ನಲ್ಲಿ ಸುತ್ತಿಯಾಗಿ ಒತ್ತಿಹಿಡಿಯಿರಿ.

ಗಾಯದ ಜಾಗಕ್ಕೆ ತಣ್ಣೀರನ್ನು ಹಾಕಿ ಗಾಯವನ್ನು ಸ್ವಚ್ಛಗೊಳಿಸಿ. ಗಾಯಗೊಂಡ ಜಾಗದ ಸುತ್ತ ಇರುವ ಕೂದಲನ್ನು ತೆಗೆಯಿರಿ. ಗಾಯಕ್ಕೆ ಯಾವುದೇ ಸೋಂಕು ತಗುಲದಂತೆ ಮಾಡಲು ನಂಜುನಿರೋಧಕ ಮುಲಾಮು ಹಚ್ಚಿ, ಬಳಿಕ ಬ್ಯಾಂಡೇಜ್ ನೆರವಿನಿಂದ ಗಾಯವನ್ನು ಮುಚ್ಚಿ. ತುರಿಕೆ ಕಾರಣಕ್ಕೆ ನಿಮ್ಮ ಸಾಕುಪ್ರಾಣಿ ಮತ್ತೆ ಅದೇ ಜಾಗವನ್ನು ಪರಚಿ, ಕಚ್ಚಿ ಕೊಳ್ಳದಿರಲಿ.

ನೊಣ ಇಲ್ಲವೇ ಇತರ ಕ್ರಿಮಿ ಕೀಟಗಳು ಆ ಜಾಗವನ್ನು ಮುತ್ತಿಕ್ಕದಂತೆ ಚರ್ಮಕ್ಕೆ ಗಾಯದ ಸ್ಪ್ರೇ ಬಳಸಿ. ಇದರಿಂದ ಬ್ಯಾಕ್ಟೀರಿಯಾ ವೈರಸ್ ಗಳು ನಾಶವಾಗುತ್ತವೆ. ಇನ್ನೂ ಹೆಚ್ಚಿನ ಗಾಯಗಳಾಗಿದ್ದ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಕಾಣಿ.

Spread the love

Related Articles

Leave a Reply

Your email address will not be published. Required fields are marked *

Back to top button