ಚಿಕ್ಕಮಗಳೂರು
ಧರೆಗುರುಳಿದ ಮರ; ತಪ್ಪಿದ ಅನಾಹುತ

ಚಿಕ್ಕಮಗಳೂರು: ಮಳೆ ವೈಪರೀತ್ಯಕ್ಕೆ ನಗರದಲ್ಲಿ ದೊಡ್ಡ ಮರವೊಂದು ಉರುಳಿ, ಬೈಕ್ ಸವಾರರೋರ್ವರಿಗೆ ರೆಂಬೆ ತಗುಲಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.
ನಗರದ ಎಲ್ಐಸಿ ಕಚೇರಿ ಸಮೀಪ ಸುಗ್ಗಿಕಲ್ ತೆರಳುವ ಮಾರ್ಗಮಧ್ಯೆ ಮನೆಯೊಂದರ ಬಳಿ ಭಾರೀ ಗಾತ್ರದ ಮರ ಬೇರುಸಹಿತ ನೆಲಕ್ಕಪ್ಪಳಿಸಿದೆ. ವಿಷಯ ತಿಳಿದು ಅರಣ್ಯ ಸಿಬ್ಬಂದಿಗಳು ಬಿದ್ದ ಮರವನ್ನು ತೆರವುಗೊಳಿಸಿದರು. ಮಳೆ ಹೆಚ್ಚಾದಂತೆ ನಗರದಲ್ಲಿ ಇಂತಹ ಅಪಾಯಕಾರಿ ಮರಗಳು ಅಲ್ಲಲ್ಲಿ ಇದ್ದು, ಇಂತಹ ಮರಗಳತ್ತ ಅರಣ್ಯ ಇಲಾಖೆ ಗಮನಿಸಿ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬೀಳಬಹುದಾದ ಮರಗಳನ್ನು ಕಡಿತಲೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.




