ರಾಮನಗರ

ಕಾಡು ಪ್ರಾಣಿಗಳ ಹಾವಳಿ ಖಂಡಿಸಿ‌ ಅನಿರ್ದಿಷ್ಟ ಧರಣಿ‌

ರಾಮನಗರ: ವನ್ಯಜೀವಿಗಳ ಹಾವಳಿ ತಡೆಗಟ್ಟುವಲ್ಲಿ ವಿಫಲವಾಗಿರುವ ಅರಣ್ಯ ಇಲಾಖೆ ನಿರ್ಲಕ್ಷ್ಯ ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಜಿಲ್ಲಾ ಅರಣ್ಯ ಅಧಿಕಾರಿಗಳ ಕಚೇರಿ ಎಸರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

೨೦೦೮ರಿಂದ ಜಿಲ್ಲೆಯಲ್ಲಿ ಆನೆಗಳ ದಾಳಿ ನಿರಂತರವಾಗಿ ನಡೆಯುತ್ತಿದೆ. ಅರಣ್ಯ ಗಡಿಯ ಗ್ರಾಮಗಳಲ್ಲಿ ಆನೆ ದಾಳಿಯಿಂದಾಗಿ ತೆಂಗು, ಮಾವು ಸೇರಿದಂತೆ ವಿವಿಧ ಬೆಳೆಗಳು ನಾಶವಾಗುತ್ತಿವೆ. ಮಾನವ ಹಾನಿಯೂ ಆಗಿದೆ. ಆದರೆ ಅಂದಿನಿಂದಲೂ ಆನೆ ದಾಳಿ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ವಿಫವಾಗಿದೆ ಎಂದು ಧರಣಿ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಕಾಡಂಚಿನಲ್ಲಿ ಬ್ಯಾರಿಕೇಡ್ ನಿರ್ಮಾಣ ಹಾಕುತ್ತೇವೆಂದು ಪ್ರತಿಭಾರಿಯೂ ಅರಣ್ಯಾಧಿಕಾರಿಗಳು ಸಬೂಬು ಹೇಳುತ್ತಲೇ ಬರುತ್ತಿದ್ದಾರೆ. ಆದರೆ ಅದು ಇನ್ನು ‌ಭರವಸೆಯಾಗಿಯೇ ಉಳಿದಿದೆ ಎಂದು ಕಿಡಿಕಾರಿದರು.

ಕಾಡು ಪ್ರಾಣಿಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಕಾವೇರಿ ವನ್ಯ ಜೀವಿ ಧಾಮದ ಅಧಿಕಾರಿಗಳು ಮತ್ತು ಜಿಲ್ಲೆಯ ಅರಣ್ಯ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯೇ ಇರುವುದೇ ಕಾಡು ಪ್ರಾಣಿಗಳು ನಾಡಿಗೆ ಬಂದು ರೈತಾಪಿ ಕುಲವನ್ನು ಸಂಕಷ್ಟಕ್ಕೆ ದೂಡಲು ಕಾರಣವಾಗಿದೆ ಎಂದು ದೂರಿದರು.

ನಿತ್ಯವು ಜಿಲ್ಲೆಯ ಒಂದಿಲ್ಲ ಒಂದು‌ ಕಡೆ‌ ಆನೆ, ಚಿರತೆ ಸೇರಿಸಂತೆ ಇತರೆ ಪ್ರಾಣಿಗಳು ದಾಂಗುಡಿ ಇಟ್ಟು ರೈತರ ಫಸಲು, ಜಾನುವಾರು ಮತ್ತು ಕೃಷಿ ಪರಿಗಳನ್ನು ನಾಶ ಮಾಡುತ್ತಿವೆ. ಅದರೂ ಅರಣ್ಯ ಇಲಾಖೆ ಇದಕ್ಕೆ ಕಡಿವಾಣ ಹಾಕುವ ಮಾರ್ಗೋಪಾಯಗಳನ್ನು ಕಂಡು ಹಿಡಿಯದೆ ಕಾಲಹರಣ ಮಾಡುತ್ತಿದೆ ಎಂದು ಕಿಡಿಕಾರಿದರು.

ಈಗಾಗಲೇ ಅತಿ ವೃಷ್ಠಿ, ಅನಾವೃಷ್ಠಿಯಿಂದಾಗಿ, ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ವ್ಯವಸಾಯ ಕಷ್ಟವಾಗಿದೆ. ಇನ್ನೊಂದೆಡೆ ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಗಳ ಹಾವಳಿ. ಈ ಎಲ್ಲಾ ವೈಪರಿತ್ಯಗಳಿಂದಾಗಿ ವ್ಯವಸಾಯ ಅಸಾಧ್ಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಡು ಪ್ರಾಣಿಗಳ ದಾಳಿಯಿಂದಾದ ನಷ್ಟಕ್ಕೆ ಅರಣ್ಯ ಇಲಾಖೆಯೇ ನಷ್ಟ ಪರಿಹಾರ ಕೊಡಬೇಕಾಗಿದೆ. ಆದರೆ ಇಲಾಖೆಯ ಮಾನದಂಡದ ಪ್ರಕಾರವು ಅಧಿಕಾರಿಗಳು ನಷ್ಟವನ್ನು ಧರಿಸಿಕೊಡುತ್ತಿಲ್ಲ. ತೆಂಗಿನ ಮರವೊಂದನ್ನು ಆನೆ ಉರುಳಿಸಿ ಹೋದರೆ ರೈತನಿಗೆ ಸಿಗುವುದು ೧೫೦೦ ರೂ, ಮಾವಿನ ಮರಕ್ಕೆ ೧೨೦೦ ರೂ ಈ ಪರಿಹಾರ ಸಾಲದಾಗಿದೆ. ತೆಂಗಿನ ಮರ ಉಳಿದಿದ್ದರೆ ಆ ರೈತನಿಗೆ ಆಗುತ್ತಿದ್ದ ಲಾಭವೇ ನಿಂತು ಹೋಯ್ತು ಇದನ್ನು ಇಲಾಖೆ ಪರಿಗಣಿಸೊಲ್ಲ. ಒಂದು ತೆಂಗಿನ ಮರ ಬೆಳೆಸಲು ಆಗಿರುವ ವೆಚ್ಚವನ್ನು ಇಲಾಖೆ ಭಧರಿಸಿಕೊಡುವುದಿಲ್ಲ. ಕಾಡು ಪ್ರಾಣಿಗಳ ದಾಳಿಯಿಂದ ರೈತ ಮೃತಪಟ್ಟರೆ ಅರಣ್ಯ ಇಲಾಖೆ ೫ ಲಕ್ಷ ರೂ ಪರಿಹಾರ ಕೊಡುತ್ತದೆ. ಒಬ್ಬ ರೈತನ ಬೆಲೆ ಕೇವ ೫ ಲಕ್ಷ ರೂ ಮಾತ್ರವೇನಾ ಎಂದು ಪ್ರಶ್ನಿಸಿದರು.

ಪ್ರತಿಭಟನೆಯ ವೇಳೆ ರೈತನ ಬೆಳೆ ಹಾನಿಗೆ ಕನಿಷ್ಠ 5 ಪಟ್ಟು ಹೆಚ್ಚಿನ ಪರಿಹಾರವನ್ನು ಕೊಡಬೇಕು. ಕಾಡಂಚಿನ ಗ್ರಾಮಗಳಲ್ಲಿ ವಾಸಿಸುವ ಗ್ರಾಮಸ್ಥರು ಜಾತಿ ಬೇಧವಿಲ್ಲದೆ ಕಾಡನ್ನು ಆಶ್ರಯಿಸಿರುತ್ತಾರೆ. ಎಸ್ಸಿಪಿ/ಟಿಪಿಎಸ್ ಯೋಜನೆಯಡಿ ಇಲಾಖೆ ಉಚಿತ ಗ್ಯಾಸ್ ಸಿಲಿಂಡರ್, ಸ್ಟೌವ್ ಮುಂತಾದ ಸೌಲಭ್ಯವನ್ನು ಒದಗಿಸುತ್ತಿದೆ. ಈ ಸೌಲಭ್ಯವನ್ನು ಎಲ್ಲಾ ಕಟುಂಬಗಳಿಗೂ ವಿಸ್ತರಿಸಬೇಕು ಎಂದು ಅವರು ಆಗ್ರಹಿಸಿದರು.

ಧರಣಿ ನಿರತರನ್ನು ಬೇಟಿ ಮಾಡಿದ ಡಿಸಿಎಫ್ ದೇವರಾಜು, ತಮ್ಮ ಸಮಸ್ಯೆಗಳನ್ನು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಾಡಂಚಿನಲ್ಲಿ ಆನೆಗಳು ಸೇರಿದಂತೆ ಕಾಡು ಪ್ರಾಣಿಗಳು ಬಾರದಂತೆ ಫೆನ್ಸಿಂಗ್ ಹಾಕುವ ಕೆಲಸ ಆಭಿಸಲಾಗುವುದು. ತಮ್ಮ ಬೇಡಿಕೆಗಳನ್ನು ನ್ಯಾಯಯುತವಾಗಿ ಈಡೇರಿಸಲಾಗುವುದು. ಅದ್ದರಿಂದ ಧರಣಿ ಹಿಂದಕ್ಕೆ‌ ಪಡೆಯುವಂತೆ ಮನವಿ ಮಾಡಿದರು.

ಇದಕ್ಕೊಪ್ಪದ ಧರಣಿ ನಿರತರು, ಸ್ಥಳಕ್ಕೆ ಅರಣ್ಯ ಸಚಿವರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಬರಬೇಕು. ಅಲ್ಲಿವರೆಗೂ ಧರಣಿ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದು ಧರಣಿ ಮುಂದುವರೆಸಿದ್ದಾರೆ.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಂಪತ್ ಕುಮಾರ್, ರಾಜ್ಯ ಸಂಚಾಲಕಿ ಅನಸೂಯಮ್ಮ, ಮಹಿಳಾ ಘಟಕದ ಅಧ್ಯಕ್ಷೆ ನಾಗಮ್ಮ, ಚನ್ನಪಟ್ಟಣ ಘಟಕದ ಅಧ್ಯಕ್ಷ ರಮೇಶ್, ರಾಮನಗರ ತಾಲೂಕು ಘಟಕದ ಅಧ್ಯಕ್ಷ ಸೀಬಕಟ್ಟೆ ಕೃಷ್ಣಪ್ಪ, ಮಾಗಡಿ ಘಟಕದ ಅಧ್ಯಕ್ಷ ಗೋವಿಂದರಾಜು, ಕನಕಪುರ ಘಟಕದ ಅಧ್ಯಕ್ಷ ಅನಂತರಾಮು, ವಿ.ಎಸ್. ಸುಜೀವನ್ ಕುಮಾರ್ ಕೃಷಿಕ ಸಮಾಜದ ಬಿ.ಟಿ. ನಾಗೇಶ್ ಮುಂತಾದವರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button