ಚೀನಿಕಾಯಿ ಹೂವಿನ ಪ್ರಯೋಜನ ಗೊತ್ತೇ..?

ಪವಿತ್ರಾ ಶೆಟ್ಟಿ
ಚೀನಿಕಾಯಿ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ಅದರ ಹೂವಿನಿಂದಲೇ ಹಲವು ಆರೋಗ್ಯ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ.
ಚೀನಿಕಾಯಿ ಹೂವನ್ನು ಹಿಚುಕಿ ಅದಕ್ಕೆ ಉಪ್ಪು ಬೆಲ್ಲ ಸೇರಿಸಿ ಅನ್ನದೊಂದಿಗೆ ಬೆರೆಸಿ ಊಟ ಮಾಡುವವರು ಇದ್ದಾರೆ. ಚೀನಿಕಾಯಿ ಹೂವಿನಿಂದ ದೋಸೆಯನ್ನು ತಯಾರಿಸಲಾಗುತ್ತದೆ. ಇದರ ಸೇವನೆಯಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಶೀತ ಕೆಮ್ಮುವಿನಂತ ಸಮಸ್ಯೆಗಳು ದೂರವಾಗುತ್ತದೆ.
ಇನ್ನು ಚೀನಿಕಾಯಿ ಇವುಗಳ ಸೇವನೆಯಿಂದ ದೃಷ್ಟಿ ಸಮಸ್ಯೆ ದೂರವಾಗುತ್ತದೆ ಎನ್ನಲಾಗಿದೆ. ಕೆಲವರಿಗೆ ಪದೇಪದೇ ಕಣ್ಣು ಡ್ರೈ ಆಗುವ ಸಮಸ್ಯೆ ಇರುತ್ತದೆ. ಅಂಥವರು ಈ ಹೂವನ್ನು ಸೇವಿಸುವುದರಿಂದ ಕಣ್ಣುಗಳ ತೇವಾಂಶ ಉಳಿಯುತ್ತದೆ.
ಇದರಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್ ಎ ಇರುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ ಯಾವುದೇ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ಪಡೆದುಕೊಳ್ಳುತ್ತದೆ.
ಮೂಳೆಗಳನ್ನು ಬಲಪಡಿಸುವ ಶಕ್ತಿ ಹೊಂದಿರುವ ಇದು ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ಹಾಗಿದ್ದರೆ ತಡಯಾಕೆ, ಇಂದೇ ನಿಮ್ಮ ಗಾರ್ಡನ್ನಲ್ಲಿ ಬೆಳೆದ ಚೀನಿಕಾಯಿ ಹೂವುಗಳನ್ನು ಕಿತ್ತು ಅಡುಗೆಗೆ ಬಳಸಿ. ಅದರ ಲಾಭ ಪಡೆದುಕೊಳ್ಳಿ.




