ಉಡುಪಿ

ಉಡುಪಿ ಜಿಲ್ಲೆಯಾದ್ಯಂತ ಎಸ್ಎಸ್ಎಲ್​ಸಿ ಪರೀಕ್ಷೆ; 77 ಪರೀಕ್ಷಾ ಕೇಂದ್ರಗಳು

ಉಡುಪಿ: ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದ್ದು, 77 ಪರೀಕ್ಷೆ ಕೇಂದ್ರದಿಂದ ಸುಮಾರು 12881 ಮಕ್ಕಳು ರೆಗುಲರ್ ಆಗಿ ಅಟೆಂಡ್ ಮಾಡುತ್ತಿದ್ದಾರೆ.

ಒಟ್ಟು 13931 ಮಕ್ಕಳು ಪರೀಕ್ಷೆ ಬರೆಯುತ್ತಿದ್ದು 77 ಕೇಂದ್ರದಿಂದ ಮಕ್ಕಳು ಬೆಳಿಗ್ಗೆ 8.30 ಯಿಂದಲೇ ಶಾಲೆಗೆ ಬರಲು ಆರಂಭ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳಿಗೆ ಸಾರಿಗೆ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಲಾಗಿದ್ದು, ಪ್ರತಿ ಕೇಂದ್ರದಲ್ಲೂ ಕೂಡ 2 ವಾಹನಗಳನ್ನು ಹೆಚ್ಚಾಗಿ ನೇಮಕ ಮಾಡಿದ್ದೇವೆ ಎಂದು ಡಿಡಿಪಿಐ ಎಚ್ ಎನ್ ನಾಗುರ್ ಮಾಹಿತಿ ನೀಡಿದರು.

ಜಿಲ್ಲೆಯ 77 ಕೇಂದ್ರಗಳಲ್ಲಿಯೂ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮುತುವರ್ಜಿಯನ್ನು ವಹಿಸಿದ್ದೇವೆ ಯಾವ ವಿದ್ಯಾರ್ಥಿಗಳಿಗೆ ತೊಂದರೆ ಇದೆ ಅಂತ ವಿದ್ಯಾರ್ಥಿಗಳಿಗೆ ನಮ್ಮ ಶಿಕ್ಷಕವರ್ಗ ಅದನ್ನು ಗಮನಿಸಿ ಶಿಕ್ಷಕರ ಸ್ವಂತ ಕಾರಿನಲ್ಲಿ ವಿದ್ಯಾರ್ಥಿಗಳನ್ನು ಅವರವರ ಕೇಂದ್ರಗಳಿಗೆ ಮತ್ತು ಮನೆಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಎಲ್ಲಾ ಮಕ್ಕಳಿಗೂ ಹಾಲ್ ಟಿಕೆಟ್ ಅನ್ನ ಕೊಡುವ ವ್ಯವಸ್ಥೆ ಮಾಡಿದ್ದೇವೆ ಯಾವುದೇ ಒಂದು ಮಗು ಕೂಡ ಹಾಲ್ ಟಿಕೆಟ್ ವಂಚನೆ ಆಗಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಪೂರ್ವಸಿದ್ಧತೆಗಳನ್ನು ಮಾಡಿದ್ದು ಸಾಮಾಜಿಕ ಅಂತರ ಹಾಗೂ ಆರೋಗ್ಯ ಸಂಬಂಧಪಟ್ಟ ವಿಚಾರಗಳಿಗೆ ಎಲ್ಲ ತಯಾರಿಯನ್ನು ನಡೆಸಿದ್ದೇವೆ ಎಂದು ಡಿಡಿಪಿಐ ಮಾಹಿತಿ ನೀಡಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button