Breaking NewsLatestರಾಜ್ಯ

ಭಾರೀ ಮಳೆ; ಉಡುಪಿ, ಚಿಕ್ಕಮಗಳೂರು ಡಿ.ಸಿ.ಗಳೊಡನೆ ಶೋಭಾ ವಿಡಿಯೋ ಕಾನ್ಫರೆನ್ಸ್ ಸಂವಾದ

ನವದೆಹಲಿ: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀಮಳೆಯ ಸಂಭವ ಹಿನ್ನೆಲೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ಬೆಳಗ್ಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ.

ಮಳೆಯಿಂದಾಗಲಿರುವ ಪೃಕತಿ ವಿಕೋಪಗಳ ಕುರಿತು, ಜಿಲ್ಲೆಯಲ್ಲಿನ ಕೋವಿಡ್ ನಿರ್ವಹಣೆ, ಕೊರೋನಾ ಮೂರನೇ ಅಲೆಗೆ ಜಿಲ್ಲೆ ನಡೆಸಿರುವ ತಯಾರಿಗಳು ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಚರ್ಚಿಸಿ ಮಾಹಿತಿ ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಜನರ ಕಷ್ಟ ನಷ್ಟಗಳಿಗೆ ಧಾವಿಸುವ ಸಂದರ್ಭ ಒದಗಿಬಂದರೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button