Breaking NewsLatestರಾಜ್ಯ
ರಾಜ್ಯದಲ್ಲಿ ಎರಡು ಕಡೆ ಆರ್ಟಿಐ ಕಾರ್ಯಕರ್ತರ ಮೇಲೆ ದಾಳಿ; ಒಬ್ಬನ ಕೊಲೆ

ಬೆಂಗಳೂರು: ರಾಜ್ಯದ ಎರಡು ಕಡೆ ಆರ್ಟಿಐ ಕಾರ್ಯಕರ್ತರ ಮೇಲೆ ಹಲ್ಲೆಯಾಗಿದ್ದು, ಒಬ್ಬನನ್ನು ಕೊಲೆ ಮಾಡಲಾಗಿದೆ.
ದುಷ್ಕರ್ಮಿಗಳು ಆರ್ಟಿಐ ಕಾರ್ಯಕರ್ತನೊಬ್ಬನನ್ನು ಕೊಂದಿರುವ ಆಘಾತಕಾರಿ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿಯಲ್ಲಿ ನಡೆದಿದೆ.
ಮೃತ ಆರ್ಟಿಐ ಕಾರ್ಯಕರ್ತನನ್ನು ಟಿ ಶ್ರೀಧರ್(40) ಎಂದು ಗುರುತಿಸಲಾಗಿದೆ. ಬೆಳಗ್ಗೆ ವಾಕಿಂಗ್ನಲ್ಲಿ ತೊಡಗಿದ್ದಾಗ ಕೊಲೆ ನಡೆದಿದೆ. ಕೊಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಘಟನೆ ಬೆಂಗಳೂರಿನ ತಾವರೆಕೆರೆಯಲ್ಲಿ ನಡೆದಿದ್ದು, ಆರ್ಟಿಐ ಕಾರ್ಯಕರ್ತ ವೆಂಕಟೇಶ್ (50) ಮೇಲೆ ಹಲ್ಲೆಯಾಗಿದೆ.
ನಾಲ್ಕೈದು ಮಂದಿ ಅಪರಿಚಿತರ ಗುಂಪು ವೆಂಕಟೇಶ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೈಕಾಲು ಕತ್ತರಿಸಿದೆ. ಚೀರಾಟ ಕೇಳಿದ ಸುತ್ತಲಿನ ಜನರು ನೆರವಿಗೆ ಧಾವಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
