Breaking NewsLatestಕಲಬುರ್ಗಿ
ಕಾಳಗಿ ಸಂಸ್ಥಾನ: ಐದು ವರ್ಷದ ಬಾಲಕನಿಗೆ ಉತ್ತರಾಧಿಕಾರಿ ಪಟ್ಟ

ಕಲಬುರಗಿ: ಐದು ವರ್ಷದ ಬಾಲಕನಿಗೆ ಮಠದ ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಮೂಲಕ ರಾಜ್ಯದಲ್ಲಿಯೇ ಕಾಳಗಿ ಸಂಸ್ಥಾನ ಮಠ ರಾಜ್ಯದ ಗಮನ ಸೆಳೆದಿದೆ.
ಇತಿಹಾಸದಲ್ಲೆ ಮೊದಲ ಬಾರಿಗೆ ಕಾಳಗಿಯ ಸುಪ್ರಸಿದ್ಧ ಸಂಸ್ಥಾನ ಹಿರೇಮಠದಲ್ಲಿ ಪೀಠಾಧಿಪತಿ ಶಿವಬಸವ ಶಿವಾಚಾರ್ಯರು ಸೋಮವಾರ ಹೃದಯಾಘಾತದಿಂದ ಲಿಂಗೈಕ್ಯರಾದ ಹಿನ್ನೆಲೆ. ಮಠದ ನೂತನ ಉತ್ತರಾಧಿಕಾರಿಯಾಗಿ ಅವರ ಪೂರ್ವಾಶ್ರಮದ ಸಹೋದರನ ಮಗನಾದ ಐದು ವರ್ಷದ ಬಾಲಕ ನೀಲಕಂಠನನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ನಿನ್ನೆ ಸ್ವಾಮೀಜಿಗಳ ಸಮ್ಮುಖದಲ್ಲಿ ಉತ್ತರಾಧಿಕಾರಿ ಪಟ್ಟದ ಪ್ರಕ್ರಿಯೆ ನಡೆಯಿತು.ಮಠದ ಉತ್ತರಾಧಿಕಾರಿ ಸ್ಥಾನ ಖಾಲಿ ಬಿಡುವಂತಿಲ್ಲ. ಹೀಗಾಗಿ ಬಾಲಕನನ್ನು ಮಠದ ಉತ್ತರಾಧಿಕಾರಿ ಮಾಡಿರೋದಾಗಿ ಸ್ವಾಮೀಜಿಗಳು ಸ್ಪಷ್ಟನೆ ನೀಡಿದ್ದಾರೆ.
ಐದು ವರ್ಷದ ಬಾಲಕನನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಮೂಲಕ ಇಡೀ ರಾಜ್ಯದಲ್ಲಿಯೇ ಕಾಳಗಿ ಸಂಸ್ಥಾನ ಮಠ ಸುದ್ದಿಯಾಗಿದೆ.
