ಹುಬ್ಬಳ್ಳಿ - ಧಾರವಾಡ

ನವಲಗುಂದ ಶ್ರೀ ಅಜಾತ ನಾಗಲಿಂಗ ಸ್ವಾಮಿಗಳ ಜಾತ್ರಾ ಮಹೋತ್ಸವ ರದ್ದು; ಆಡಳಿತ ಮಂಡಳಿ ಪ್ರಕಟಣೆ

ಧಾರವಾಡ: ನವಲಗುಂದ ತಾಲೂಕಿನ ಸುಪ್ರಸಿದ್ದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಸ್ವಾಮಿಗಳ ಜಾತ್ರಾ ಮಹೋತ್ಸವವನ್ನು ಕೋವಿಡ್ ನಿಯಂತ್ರಣದ ಹಿನ್ನೆಲೆ ಈ ವರ್ಷ ರದ್ದುಗೊಳಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಈ ಕುರಿತು ಮಾಧ್ಯಮ ಪ್ರಕಟನೆ ಹೊರಡಿಸಿರುವ ದೇಶವಸ್ಥಾನದ ಆಡಳಿತ ಮಂಡಳಿಯು ಕೊರೋನಾ ವೈರಸ್ ಹತ್ತಿಕ್ಕುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಮಾರ್ಗಸೂಚಿ ಆದೇಶದನ್ವಯ ಈ ವರ್ಷದ ಜಾತ್ರ ಮಹೋತ್ಸವವನ್ನು ರದ್ದು ಮಾಡಲಾಗಿದೆ.

ಮುಖ್ಯವಾಗಿ ಜುಲೈ 14ರ ಆರಾಧನೆ, ಜೊತೆಗೆ 15 ರಂದು ನಡೆಯಬೇಕಿದ್ದ ಪಲಕ್ಕಿ ಹಾಗೂ ಮಣೆ ಉತ್ಸವವನ್ನು ರದ್ದುಗೊಳಿಸಲಾಗಿದ್ದು, ಇನ್ನು ಶ್ರೀ ಜಗದ್ಗುರು ನಾಗಲಿಂಗ ಸ್ವಾಮಿಗಳ ಗದ್ದುಗೆ ದರ್ಶನವನ್ನು ಪಡೆಯಲು ಕಡ್ಡಾಯವಾಗಿ ಸಾಮಾಜಿಕ ಅಂತರದೊಂದಿಗೆ ಅವಕಾಶ ನೀಡಲಾಗಿದೆ. ಅಲ್ಲದೆ ರಾಜ್ಯದಲ್ಲಿ ಈಗಾಗಲೇ ಕೊರೊನಾ ಎರಡನೇ ಅಲೆಯು ಕಡಿಮೆಯಾಗಿದ್ದರು ಸಹ ವೈರಸ್ ಹರಡುವಿಕೆ ಸಂಪೂರ್ಣವಾಗಿ ನಿಂತಿಲ್ಲ, ಇದರ ಜೊತೆಗೆ ಮೂರನೇ ಅಲೆಯ ಬೀತಿ ಇರುವುದರಿಂದ ಸಾರ್ವಜನಿಕರ ಹಾಗೂ ಭಕ್ತರ ಆರೋಗ್ಯ ದೃಷ್ಠಿಯಿಂದ ಈ ನಿರ್ಧಾರವನ್ನು ದೇವಸ್ಥಾನ ಆಡಳಿತ ಮಂಡಳಿ ನಿರ್ಧಾರ ಮಾಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button