Breaking NewsLatestಇತರ ಕ್ರೀಡೆಕ್ರೀಡೆವಿದೇಶ
ಕಪ್ಪು ವರ್ಣೀಯ ಆಟಗಾರರಿಗೆ ನಿಂದನೆ; ಕ್ರಮಕ್ಕೆ ಬ್ರಿಟನ್ ಸೂಚನೆ

ಲಂಡನ್: ಇತ್ತೀಚೆಗೆ ನಡೆದ ಯುರೋ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದ ನಂತರ ಇಂಗ್ಲೇಂಡ್ ತಂಡದ ಕೆಲವು ಕಪ್ಪು ವರ್ಣೀಯ ಆಟಗಾರರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಜನಾಂಗೀಯವಾಗಿ ನಿಂದಿಸಿ ಸಂದೇಶ ರವಾನಿಸಿದ್ದು, ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬ್ರಿಟನ್ ಸರ್ಕಾರ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಸೂಚಿಸಿದೆ.
ನಿಂದನಾತ್ಮಕ ಸಂದೇಶ ಹರಿಬಿಟ್ಟವರ ವಿವರವನ್ನು ತಕ್ಷಣ ಒದಗಿಸುವಂತೆ ಸೂಚಿಸಿರುವ ಬ್ರಿಟನ್ ಸರ್ಕಾರ, ಈ ವಿಷಯವಾಗಿ ಸಾಮಾಜಿಕ ಮಾಧ್ಯಮಗಳ ವೇದಿಕೆ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಸರ್ಕಾರವೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದೆ
