ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಹುಬ್ಬಳ್ಳಿ : ಮೂವರು ಕಳ್ಳರನ್ನು ಬಂಧಿಸಿದ ಉಪನಗರ ಠಾಣೆಯ ಪೊಲೀಸರು

ಧಾರವಾಡ : ಹುಬ್ಬಳ್ಳಿ ನಗರದ ಹೊರವಲಯದ ಪ್ರದೇಶ ಹಾಗೂ ಪಟ್ಟಣದಲ್ಲಿ ಸುಲಿಗೆ ಮತ್ತು ದರೋಡೆ ಮಾಡುತ್ತಿದ್ದ, ಮೂವರು ಖದೀಮರನ್ನು ಹಡೆಮುರಿ ಕಟ್ಟುವಲ್ಲಿ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅದರಲ್ಲಿ ಇಬ್ಬರು ಆರೋಪಿಗಳು ಹಳೇ ಹುಬ್ಬಳ್ಳಿಯ ನಿವಾಸಿಯಾಗಳಾಗಿದ್ದು, ಇನ್ನೋರ್ವ ಮಂಟೂರು ರಸ್ತೆಯ ನಿವಾಸಿಯಾಗಿದ್ದಾನೆ.

ಹಳೇಹುಬ್ಬಳ್ಳಿ ಈಶ್ವರನಗರದ ಹಬೀದ ಅಜಗರ ಅಲಿ ಕಲಾಸಿ, ಹಾಗೂ ಜಿದ್ದಿಇಮ್ರಾನ್ ಅಲಿಯಾಸ್ ಕಟಗಾ ಇಮ್ತಿಯಾಜ್ ಮನಿಯಾರ, ಮಂಟೂರ ರಸ್ತೆಯ ನಿವಾಸಿ ಜೈಲಾನಿ ಬಾಷಾಸಾಬ ಶೇರಖಾನ ಬಂಧಿತ ಆರೋಪಿಗಳಾಗಿದ್ದಾರೆ.

ನಗರದ ವಿವಿಧ ಕಡೆಗಳಲ್ಲಿ ದರೋಡೆ ಮಾಡುತ್ತಿದ್ದವರ ಮೇಲೆ, ಹದ್ದಿನ ಕಣ್ಣಿಟ್ಟಿದ್ದ ಉಪನಗರ ಠಾಣೆಯ ಇನ್ಸ್ ಪೆಕ್ಟರ್ ರವಿಚಂದ್ರ ಟೀಮ್, ACP ವಿನೋದ್ ಮುಕ್ತೆದಾರ ಮಾರ್ಗದರ್ಶನದಲ್ಲಿ, ಆರೋಪಿಗಳನ್ನು, ದರೋಡೆಗೆ ಬಳಸುತ್ತಿದ್ದ ಆಯುಧಗಳನ್ನು ಹಾಗೂ ದರೋಡೆ ಮಾಡಿದ ಸಾಮಗ್ರಿಗಳ ಜೊತೆಗೆ ಪೊಲೀಸರು ಬಂಧಿಸಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button