ಆ ಮ್ಯಾಟರ್ಗೆ ಕಾಂಪ್ರಮೈಸ್ ಆದರಾ ನಟ ದರ್ಶನ್?

ಪೂರ್ಣ ವಿ-ರಾಮ
ನಿನ್ನೆಯಷ್ಟೇ ತಪ್ಪು ಮಾಡಿದ್ದು ಯಾರು ಅಂತ ಗೊತ್ತಾದ್ರೆ ಅವರ ರೆಕ್ಕೆ ಪುಕ್ಕ ಅಷ್ಟೇ ಅಲ್ಲ, ತಲೆ…ತಲೆ ತೆಗೀತೀನಿ ಅಂದಿದ್ದ ನಟ ದರ್ಶನ್, ಈಗ ಉಮಾಪತಿ ಎಷ್ಟೆಂದರೂ ನಮ್ಮ ನಿರ್ಮಾಪಕರು. ಇದರಲ್ಲಿ ಗಲಾಟೆ ಕೇಸ್ ಅಂತ ಮಾಡಿಕೊಳ್ಳುವ ವಿಷಯವೇ ಇಲ್ಲ. ಇದನ್ನ ಇಲ್ಲಿಯೇ ಬಿಟ್ಟುಬಿಡೋಣ ಎಂದಿದ್ದಾರೆ. ಆ ಮೂಲಕ ಎರಡು ದಿನದಿಂದ ಓಡಾಡುತ್ತಿದ್ದ ನಕಲಿ ದಾಖಲೆ ಸೃಷ್ಟಿಸಿ ವಂಚನೆ ವಿಷಯಕ್ಕೆ ಫುಲ್ ಸ್ಟಾಪ್ ಇಡಲು ಮುಂದಾಗಿದ್ದಾರೆ.
ಸಡನ್ ಬೆಂಗಳೂರಿಗೆ ಬಂದಿಳಿದ ದರ್ಶನ್!
ನಿನ್ನೆವರೆಗೂ ಮೈಸೂರಿನಲ್ಲಿ ಇದ್ದ ದರ್ಶನ್ ಇದ್ದಕ್ಕಿದ್ದಂತೆ ಬೆಂಗಳೂರು ತಲುಪಿದ್ದು, ‘ನಾವೆಲ್ಲಾ ಸ್ನೇಹಿತರೇ…ಇದನ್ನ ಎಳೆಯೋದು ಬೇಡ. ಉಮಾಪತಿ ಬೇರೆಯವರಲ್ಲ. ಇನ್ಯಾಕೆ ಈ ವಿಷಯ ಉದ್ದ ಮಾಡೋದು’ ಎಂದಿದ್ದಾರೆ. ನಿನ್ನೆ ದಿನ ಉಮಾಪತಿ ಅವರು “ನಾನು ಯಾರಿಗೂ ಕೇರ್ ಮಾಡುವುದಿಲ್ಲ. ನನಗೆ 25 ಕೋಟಿ ವಂಚಿಸುವ ಅಗತ್ಯ ಇಲ್ಲ. ನನ್ನ ಬಳಿ ಇರುವ ಮೂರು ಸ್ಪೋಟಕ ವಿಷಯ ಹೇಳಿದರೆ ಇಡೀ ಕರ್ನಾಟಕ ಬೆಚ್ವಿ ಬೀಳುತ್ತದೆ’ ಎಂದು ಹೊಸ ಬಾಂಬ್ ಸಿಡಿಸಿದ್ದರು. ಅದಾಗಿ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಹೊಸ ಬೆಳವಣಿಗೆ ಆದಂತಿದೆ. ದರ್ಶನ್ ಅವರ ಮಾತಿನ ದಾಟಿ ಗಮನಿಸಿದರೆ ಇದನ್ನ ಇಲ್ಲಿಗೇ ನಿಲ್ಲಿಸೋದು ಬೆಟರ್ ಎನ್ನುವಂತಿದೆ. ಇನ್ನೊಂದು ಮೂಲದ ಪ್ರಕಾರ ಉಮಾಪತಿ, ದರ್ಶನ್ ಅವರನ್ನು ಭೇಟಿ ಆಗಲು ಆರ್ ಆರ್ ನಗರದ ಅವರ ನಿವಾಸದ ಕಡೆ ಹೊರಟಿದ್ದಾರೆ ಎನ್ನಲಾಗುತ್ತಿದೆ.




