ಜಿಲ್ಲಾ ಸುದ್ದಿ
ಆರೋಗ್ಯಾಧಿಕಾರಿಗೆ ಅಪಘಾತ; ಶಾಸಕನ ಅಮಾನವೀಯ ನಡೆಗೆ ಆಕ್ರೋಶ

ಚಿಕ್ಕಮಗಳೂರು: ಆರೋಗ್ಯಾಧಿಕಾರಿಯೋರ್ವರು ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ಸನಿಹದಲ್ಲೇ ಕಾರು ನಿಲ್ಲಿಸಿಕೊಂಡಿದ್ದ ತರೀಕೆರೆ ಶಾಸಕ ಕಾರಿನಿಂದ ಕೆಳಗಿಳಿಯದೇ ಸಹಾಯಕ್ಕೆ ಮುಂದಾಗದಿರುವುದು ಸಾರ್ವಜನಿಕರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ, ಟೀಕೆಗೆ ಗುರಿಯಾಗಿದೆ.
ಕೋವಿಡ್ ಕರ್ತವ್ಯ ಮುಗಿಸಿ ತರೀಕೆರೆಯ ಲಕ್ಕವಳ್ಳಿ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಹಿರಿಯ ಆರೋಗ್ಯಾಧಿಕಾರಿ ಡಾ.ರಮೇಶ್ ಕುಮಾರ್ ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡು ರಕ್ತದ ಮಡುವಲ್ಲೇ ಅರ್ದ ತಾಸಿಗೂ ಹೆಚ್ಚುಕಾಲ ಒದ್ದಾಟ ನಡೆಸುತ್ತರೂ ಅಲ್ಲೇ ಕಾರು ನಿಲ್ಲಿಸಿದ್ದ ಶಾಸಕ ಡಿ.ಎಸ್ ಸುರೇಶ್ ಕಾರಿನಿಂದ ಕೆಳಗಿಳಿಯಲೇ ಇಲ್ಲವೆಂಬ ಆರೋಪ.
ಆಂಬುಲೆನ್ಸ್ ಬರುವ ಮೊದಲು ತಮ್ಮ ಕಾರಿನಲ್ಲೇ ಕರೆದೊಯ್ಯುವಂತಹ ಮಾನವೀಯತೆಯೂ ತೋರದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣಲಾಗಿದೆ. ಕೊನೆಗೆ ಆಂಬುಲೆನ್ಸ್ ಬಂದು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಡಾ.ರಮೇಶ್ ಕುಮಾರ್ ಪ್ರಾಣ ಹೋಗಿದೆ.




