ಆಹಾರಲೈಫ್ ಸ್ಟೈಲ್

ಜೀರ್ಣಕ್ರಿಯೆ ಸುಧಾರಿಸುವ ಇಂಗು!

ಪವಿತ್ರಾ

ಇಂಗಿನ ಮಹತ್ವ ಬಹು ದೊಡ್ಡದು . ಅಡುಗೆಗೆ ರುಚಿ ಕೊಡುವ ಜೊತೆಗೆ ಇದು ಆಹಾರದ ಕಾಳಜಿಯನ್ನೂ ಮಾಡುತ್ತದೆ. ಹಾಗಿದ್ದರೆ ಇಂಗಿನ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.

ಇಂಗು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಅಜೀರ್ಣ ಸಮಸ್ಯೆಯಿಂದ ಹೊಟ್ಟೆ ನೋಯುತ್ತಿದ್ದರೆ ಇಂಗು ಬೆರೆಸಿದ ಮಜ್ಜಿಗೆ ಕುಡಿದು ನೋಡಿ. ಕೆಲವೇ ಕ್ಷಣಗಳಲ್ಲಿ ಹೊಟ್ಟೆ ನೋವು ಮಾಯವಾಗುತ್ತದೆ.

ಗ್ಯಾಸ್ ಸಮಸ್ಯೆ ಹೆಚ್ಚದಂತೆ ಆಲೂಗಡ್ಡೆ ಅಥವಾ ಇತರ ಬೇಳೆಗಳಿಂದ ಸಾಂಬಾರು ತಯಾರಿಸುವ ವೇಳೆ ಇಂಗನ್ನು ಬಳಸುತ್ತಾರೆ. ಇದು ಹೊಟ್ಟೆಯುಬ್ಬರದ ಸಮಸ್ಯೆಯಿಂದಲೂ ನಿಮ್ಮನ್ನು ಪಾರು ಮಾಡುತ್ತದೆ. ಇದರಲ್ಲಿ ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣವಿದೆ. ಇದು ಉಸಿರಾಟದ ಸಮಸ್ಯೆಯನ್ನು ನಿವಾರಿಸುತ್ತದೆ.

ಶೀತ ಕೆಮ್ಮಿನಿಂದ ಮುಕ್ತಿ ನೀಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಕೊಲೆಸ್ಟ್ರಾಲ್ ದೂರ ಮಾಡುತ್ತದೆ. ರಜಾದಿನಗಳ ಸಂದರ್ಭದಲ್ಲಿ ಹೆಣ್ಣುಮಕ್ಕಳಲ್ಲಿ ಕಾಣುವ ಹೊಟ್ಟೆನೋವಿಗೂ ಇದು ಪರಿಹಾರ ನೀಡುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button