ಆಹಾರಲೈಫ್ ಸ್ಟೈಲ್
ಆಮ್ಲೇಟ್ ಮೃದುವಾಗಿಸುವ ಟಿಪ್ಸ್….

ಪವಿತ್ರಾ
ಮೊಟ್ಟೆಯಿಂದ ತಯಾರಿಸಿದ ಆಮ್ಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ. ಆಮ್ಲೇಟ್ ಅನ್ನು ಮತ್ತಷ್ಟು ಮೃದುವಾಗಿಸುವ, ರುಚಿಯಾಗಿಸುವ ಕೆಲವು ಟಿಪ್ಸ್ ಗಳು ಇಲ್ಲಿವೆ ಕೇಳಿ.
ಆಮ್ಲೆಟ್ ಅನ್ನು ರೂಮ್ ಟೆಂಪರೇಚರ್ ನಲ್ಲೇ ಇಡಿ. ಅಂದರೆ ಫ್ರಿಜ್ ನಿಂದ ಹೊರತೆಗೆದ ಕೂಡಲೆ ಆಮ್ಲೆಟ್ ಮಾಡಲು ಬಳಸಿದಿರಿ.
ಅಮ್ಲೇಟ್ ಮೃದು ಆಗಬೇಕಿದ್ದರೆ ದೋಸೆ ಕಾವಲಿಗೆ ಮೊಟ್ಟೆಯನ್ನು ಒಡೆದು ಹಾಕುವ ಬದಲು ಇನ್ನೊಂದು ಪಾತ್ರೆಗೆ ಹಾಕಿ ಚೆನ್ನಾಗಿ ಗೊಟಾಯಿಸಿ. ಬೇಕಿದ್ದರೆ ತುಸು ಹಾಲು ಇಲ್ಲವೇ ಕ್ರೀಮ್ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಆಮ್ಲೇಟ್ ಉಬ್ಬಿ ಬರುತ್ತದೆ.
ಮೊಟ್ಟೆ ಒಡೆದು ಹಾಕುವಾಗ ತುಸು ಸೋಡಾ ನೀರು ಬೆರೆಸಿದರೂ ಆಮ್ಲೇಟ್ ಆಕರ್ಷಕವಾಗಿ ಉಬ್ಬಿ ಬರುತ್ತದೆ. ಆಮ್ಲೇಟ್ ತಯಾರಿ ವೇಳೆ ನಾನ್ ಸ್ಟಿಕ್ ತವಾವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.
ಪರ್ಫೆಕ್ಟ್ ಆಮ್ಲೇಟ್ ಗಾಗಿ ಬೆಂಕಿ ಮಧ್ಯಮ ಹಂತದಲ್ಲಿರಲಿ. ಸಿಮ್ ನಲ್ಲಿ ಅಥವಾ ದೊಡ್ಡ ಉರಿಯಲ್ಲಿಡುವ ತಪ್ಪು ಮಾಡದಿರಿ. ಆಮ್ಲೆಟ್ ತಯಾರಿ ವೇಳೆ ಎಣ್ಣೆ ಬದಲು ಬೆಣ್ಣೆ ಬೆರೆಸಿ ನೋಡಿ, ರುಚಿ ಹೆಚ್ಚುತ್ತದೆ




