ದರ್ಶನ್ ಹೆಸರಲ್ಲಿ ವಂಚನೆ; ಮಹಿಳೆ ಬಂಧನ
ನಟ ದರ್ಶನ್ ಸ್ನೇಹಿತರ ಹೆಸರು ಹೇಳಿಕೊಂಡು ಅವರಿಗೆ ಕರೆಮಾಡಿದ ಅರುಣಾ ಕುಮಾರಿ ಎಂಬ ನಕಲಿ ಬ್ಯಾಂಕ್ ಉದ್ಯೋಗಿಯನ್ನು ಮೈಸೂರು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕುರಿತು ದೂರಿನ ವಿಚಾರಣೆಗೆ ಎಸಿಪಿ ಕಚೇರಿಗೆ ಹಾಜರಾದ ನಟ ದರ್ಶನ್, ಇದೊಂದು ಪ್ರೀ ಪ್ಲಾನ್ ಚೀಟಿಂಗ್ ವಿಚಾರ. ನನ್ನ ಹೆಸರು ಬಳಸಿ ಹಣ ಮಾಡಲು ನಕಲಿ ಬ್ಯಾಂಕ್ ಉದ್ಯೋಗಿ ಎಂದು ಮಹಿಳೆಯೊಬ್ಬರು ಕರೆ ಮಾಡಿ, ೨೫ ಕೋಟಿ ಹಣವನ್ನು ನಿಮ್ಮ ಸ್ನೇಹಿತರು ಸಾಲದ ರೂಪದಲ್ಲಿ ಪಡೆಯುತ್ತಿದ್ದಾರೆ. ಅದಕ್ಕೆ ನೀವು ಶ್ಯೂರಿಟಿ ಹಾಕಬೇಕು ಎಂದಿದ್ದರಂತೆ. ಅನುಮಾನ ಬಂದ ತಕ್ಷಣ ದರ್ಶನ್ ಸ್ನೇಹಿತರು ಈ ಬಗ್ಗೆ ದೂರು ನೀಡಿದ್ದರು. ಪೊಲೀಸ್ ಇಲಾಖೆ ಅರುಣಾ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
‘ಉಮಾಪತಿ ಹೇಳಿದ್ದಕ್ಕೆ ಹಾಗೆ ಮಾಡಿದೆ!’
ನಕಲಿ ಬ್ಯಾಂಕ್ ಮ್ಯಾನೇಜರ್ ಅರುಣಾ ಅವರನ್ನು ವಿಚಾರಣೆ ಮಾಡುವಾಗ ಅವರು ಅಚ್ಚರಿಯ ಹೇಳಿಕೆ ಒಂದನ್ನು ನೀಡಿದ್ದು, ದರ್ಶನ್ ಅವರ ಸ್ನೇಹಿತರಾದ ಉಮಾಪತಿ ಅವರೇ ಇಷ್ಟನ್ನೆಲ್ಲಾ ಮಾಡಿಸಿದ್ದು ಎಂದಿದ್ದಾರೆ. ರಾಬರ್ಟ್ ಚಿತ್ರದ ನಿರ್ಮಾಪಕರೂ, ದರ್ಶನ್ ಆತ್ಮೀಯ ಗೆಳೆಯರೂ ಆಗಿರುವ ಉಮಾಪತಿ ಯಾಕೆ ಹಾಗೆ ಮಾಡುತ್ತಾರೆ? ಇದರ ಹಿಂದಿರುವ ವ್ಯಕ್ತಿಗಳು ಯಾರು ಎನ್ನುವುದು ತನಿಖೆ ನಂತರವಷ್ಟೇ ಗೊತ್ತಾಗಬೇಕಿದೆ.
