ಕಲಬುರ್ಗಿ
ಕಲಬುರ್ಗಿ ಜಿಲ್ಲೆ ಪ್ರಗತಿ ಪರಿಶೀಲನಾ ಸಭೆ ರದ್ದು ಮಾಡಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಸಿಎಂ

ಕಲಬುರಗಿ: ಸಿಎಂ ಬಿಎಸ್‌ವೈ ಜಿಲ್ಲಾಢಳಿತದೊಂದಿಗೆ ಶನಿವಾರ ನಡೆಸಬೇಕಾದ ಕೋವಿಡ್ ಹಾಗೂ ಇತರೆ ಅಭಿವೃದ್ಧಿ ಕೆಲಸಗಳ ಪ್ರಗತಿ ಪರಿಶೀಲನಾ ಸಭೆ ದಿಢೀರ ಆಗಿ ರದ್ದಾಗಿದೆ. ಸಮಯದ ಅಭಾವ ಹಾಗೂ ನಗರದಲ್ಲಿ ಮೋಡ ಕವಿದ ವಾತಾವರಣದ ಹಿನ್ನೆಲೆ ಸಭೆ ರದ್ದುಗೊಳಿಸಿದ್ದಾರೆ.
ಜಿಲ್ಲಾಡಳಿತದ ಜೊತೆಗೆ ಕೋವಿಡ್-19 ಮತ್ತು ಇತರೆ ಅಭಿವೃದ್ಧಿ ಕೆಲಸಗಳ ಪ್ರಗತಿ ಪರಿಶೀಲನೆ ಸಭೆ ಶನಿವಾರ ಅಪರಾಹ್ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಿಗದಿಯಾಗಿತ್ತು. ಸುಮಾರು 15 ದಿನಗಳಿಂದ ವಿವಿಧ ಇಲಾಖೆ ಪ್ರಮುಖ ಅಧಿಕಾರಿಗಳು ದಾಖಲಾತಿಗಳನ್ನು ಸಂಗ್ರಹಿಸಿ ನಿಗಧಿಯಂತೆ ಇಂದು ಮಿಟಿಂಗ್ ಹಾಜರಾಗಿದ್ದರು. ಸಭೆ ರದ್ದು ಹಿನ್ನಲೆ ಅಧಿಕಾರಿಗಳು ವಾಪಸ್ ತೆರಳಿದ್ರು. ವಿಶೇಷ ವಿಮಾನದ ಮೂಲಕ ಸಿಎಂ ಬಿಎಸ್ ವೈ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.




