ಟಿವಿಮನರಂಜನೆ

ಬಿಗ್ ಬಾಸ್ ಮನೆಯಲ್ಲ ‘ಬೀಪ್’ ಬಾಸ್ ಮನೆ!

ಪೂರ್ಣ ವಿ-ರಾಮ

ಅವರಿಬ್ಬರ ಜಗಳ ಎಷ್ಟು ತಾರಕಕ್ಕೆ ಏರಿತ್ತೆಂದರೆ ಅವರ ಮಾತು ಮಾತಿನ ಮಧ್ಯೆ ಬೀಪ್ ಬೀಪ್ ಸೌಂಡೇ ಹೆಚ್ಚು ಕೇಳುತ್ತಿತ್ತು. ಅವಾಚ್ಯ ಶಬ್ದಗಳನ್ನು ಬಳಸುವಾಗ ಏನು ವಾಹಿನಿಯವರು ಒಂದು ಸೌಂಡ್ ಬಳಸುತ್ತಾರೆ, ಅದನ್ನೇ ಅಲ್ಲಿ ಬಳಸಲಾಗಿತ್ತು. ಅಷ್ಟು ದೊಡ್ಡ ಮಟ್ಟದ ಜಗಳ ಸ್ಪರ್ಧಿಗಳಾದ ಪ್ರಶಾಂತ್ ಸಂಭರಗಿ ಮತ್ತು ಚಕ್ರವರ್ತಿ ಚಂದ್ರಚೂಡ್ ನಡುವೆ ನಡೆಯಿತು!

ತಂದಿಡುವ ಕೆಲಸ ಮಾಡಬೇಡಿ ಎಂದ ಚೂಡ್!

ಚಕ್ರವರ್ತಿ ಚಂದ್ರಚೂಡ್ ಮತ್ತು ಪ್ರಶಾಂತ್ ಸಂಭರಗಿ ಇಲ್ಲಿಯವರೆಗೆ ಈ ಮಟ್ಟದ ಕಿತ್ತಾಟ ನಡೆಸಿಯೇ ಇರಲಿಲ್ಲ. ಸಣ್ಣ ಪುಟ್ಟ ಟಾಸ್ಕ್ ಸಂಬಂಧಿತ ಕೂಗಾಟ-ರೇಗಾಟ ಬಿಟ್ಟರೆ, ಅವಾಚ್ಯ ಶಬ್ದಗಳ ಬಳಕೆ ಮಾಡಿಕೊಂಡು ಬೀದಿ ಕಾಳಗಕ್ಕೆ ಇಳಿದಿರಲೇ ಇಲ್ಲ. ಅದ್ಯಾವಾಗ ಚಂದ್ರಚೂಡ್ ಫಿಟ್ಟಿಂಗ್ ಇಡುವ, ತಂದಿಟ್ಟು ತಂದಾನಾನಾ ಎನ್ನುವ ಕೆಲಸ ಮಾಡಬೇಡಿ ಎಂದರೋ ಸಂಭರಗಿಗೆ ಕೋಪ ನೆತ್ತಿಗೇರಿದೆ. ಕೊನೆಗದು ಅವಾಚ್ಯ ಶಬ್ದಕ್ಕೆ ಹೋಗಿ ಮುಟ್ಟಿದೆ.

ಅರ್ಧಕ್ಕೆ ನಿಂತುಹೋಗಿದ್ದ ಬಿಗ್ ಬಾಸ್ ಸೀಜನ್ ನ ಮರು ಶುರುವಾತಿನ ಮೂರನೇ ವಾರವಾಗಿರೋ ಈ ವಾರ ಯಾರು ಮನೆಯಿಂದ ಆಚೆ ಬರುತ್ತಾರೆ ಎನ್ನುವ ಕುತೂಹಲ ಒಂದು ಕಡೆಯಾದರೆ ಗುಂಪುಗಾರಿಕೆಯಲ್ಲಿ ಗುಂಪುಗಾರಿಕೆ ಶುರುವಾಗಿ, ಜಗಳಗಳ ನಡುವೆ ಒಳಜಗಳ ಶುರುವಾಗಿ, ಕೊನೆಗದು ಬೀಪ್ ಹಾಕುವ ಹಂತಕ್ಕೆ ಬಂದು ನಿಂತಿದೆ. ಮುಂದೇನಾಗುತ್ತೆ? ಯಾರು ಈ ವಾರ ಮನೆಯಿಂದ ಹೊರಬರುತ್ತಾರೆ? ಚಂದ್ರಚೂಡ್ ಹಾಗೂ ಪ್ರಶಾಂತ್ ಸಮರೋಪಾದಿಯ ವಾಕ್ಯುದ್ಧ ಎಲ್ಲಿಗೆ ಹೋಗಿ ನಿಲ್ಲುತ್ತೆ? ಕಿಚ್ಚ ಸುದೀಪ್ ಅವರಿಂದ ಇವರೆಲ್ಲರಿಗೆ ಯಾವ ರೀತಿಯ ಕ್ಲಾಸ್ ಶುರುವಾಗುತ್ತೆ? ಕಾದು ನೋಡೋಣ…ನೋಡುತ್ತಾ ನೋಡುತ್ತಾ ಕಾಯೋಣ!

Spread the love

Related Articles

Leave a Reply

Your email address will not be published. Required fields are marked *

Back to top button