‘ನಿಧಿ’ ಹೊರತೆಗೆದ ಬಿಗ್ಬಾಸ್ ಮನೆ!

ಪೂರ್ಣ ವಿ-ರಾಮ
ಅರ್ಧ ಆಟಕ್ಕೆ ಬ್ರೇಕ್ ಹಾಕಿ ಮತ್ತೆ ಶುರು ಹಚ್ಚಿಕೊಂಡಿರುವ ಬಿಗ್ ಬಾಸ್ ಮನೆಯಿಂದ ಮೊದಲ ಎಲಿಮಿನೇಷನ್ ಪ್ರಕ್ರಿಯೆಯಲ್ಲೇ ನಿಧಿ ಸುಬ್ಬಯ್ಯ ಹೊರನಡೆದಿದ್ದಾರೆ!
ದೊಡ್ಮನೆ ಸೇರಿದ ಎಲ್ಲಾ ಸೆಲೆಬ್ರಿಟಿಗಳ ಪೈಕಿ ಯಾಕೆ ನಿಧಿ ಔಟ್ ಆದರು ಎಂಬ ಕಾರಣ ಇಂಟರೆಸ್ಟಿಂಗ್ ಆಗಿದೆ!
ಅರವಿಂದ್ಗೆ ಅಡ್ಡಡ್ಡ ಮಾತಾಡಿದ್ದು ತಪ್ಪಾಯ್ತಾ?
ಆಟಗಾರ ಅರವಿಂದ್ ಹಾಗೂ ನಿಧಿ ನಡುವೆ ಮಾತಿನ ಜಟಾಪಟಿ ಜೋರಾಗಿಯೇ ನಡೆದಿತ್ತು. ಅರು ಇವರನ್ನು ಮುಚ್ಕೊಂಡ್ ಇರಿ ಎಂದಿದ್ದರು. ಅದಕ್ಕೆ ಕೋಪಗೊಂಡ ನಿಧಿ, ಅಷ್ಟೊಂದು ಸಾಧನೆ ಮಾಡಿದ್ದರೂ ಒಂದು ಕಪ್ ಗೆಲ್ಲಲು ತಾಕತ್ತಿಲ್ಲದವರೆಲ್ಲಾ ಮಾತಾಡ್ತವೆ ಎಂದು ರೇಗಿದ್ದರು. ಕೂಗಿದ್ದರು. ಆ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಿಧಿ ಹೇಳಿಕೆಗೆ ವಿರೋಧ ವ್ಯಕ್ತವಾಯಿತು. ಆ ಕಾರಣಕ್ಕೆ ಓಟಿಂಗ್ ವಿಷಯದಲ್ಲಿ ಕೂಡ ಹೊಡೆತ ಬಿತ್ತು.
ಮೊದಲ ವಾರ ಎಲಿಮಿನೇಷನ್ ಇರ್ಲಿಲ್ಲ!
ಬಿಗ್ ಬಾಸ್ ಈ ಮರುಕಂತು ಶುರುವಾದ ಮೊದಲ ವಾರ ಎಲಿಮಿನೇಷನ್ ಅನ್ನೇ ಕ್ಯಾನ್ಸಲ್ ಮಾಡಿ, ಇನ್ನೂ ಅಸಲಿ ಆಟ ಶುರುವಾಗಿಲ್ಲ. ಯಾರ್ಯಾರು ಏನೇನು ಪರಫಾರ್ಮ್ ಮಾಡ್ತಾರೆ ಅಂತ ಕ್ಲಾರಿಟಿ ಸಿಕ್ಕಿಲ್ಲ. ಹಾಗಾಗಿ ಮೊದಲ ವಾರ ಹೊರ ಕಳಿಸುವ ಪ್ರಕ್ರಿಯೆ ಇರುವುದಿಲ್ಲ ಎಂದಿತ್ತು. ಎರಡನೇ ವಾರಕ್ಕೆ ನಿಧಿ ಸುಬ್ಬಯ್ಯ ಅವರನ್ನು ಹೊರಕಳಿಸಿತು.
ಹೊರಬರುವಾಗ ನಿಧಿ ಕಣ್ಣಲ್ಲಿ ಒಂದಿಷ್ಟು ಮೌನವಿತ್ತು. ಮೊಗದಲ್ಲಿ ನೋವಿತ್ತು. ಓಟ್ ಹಾಕದೇ ಇರಲು ಕಾರಣ ಹುಡುಕುವ ತವಕವಿತ್ತು. ಇಲ್ಲಿಗೆ ನಿಧಿ ಸುಬ್ಬಯ್ಯ ಬಿಗ್ ಬಾಸ್ ಕಥೆ ಮುಗಿಯಿತು!




