“ಡಾರ್ಲಿಂಗ್“ಗೆ ಪತ್ರ ಬರೆದ ಶಾರೂಖ್!

ಪೂರ್ಣ ವಿ-ರಾಮ
ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಖ್ಯಾತ ನಟಿಯೊಬ್ಬಳಿಗೆ ವಿಚಿತ್ರ ರೀತಿಯಲ್ಲಿ ಮನವಿ ಮಾಡಿಕೊಂಡಿದ್ದು, ಸದ್ಯದ ಬಾಲಿವುಡ್ ಅಂಗಳದಲ್ಲಿ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ!
ನಟಿ ಆಲಿಯಾ ಭಟ್ ಇದೀಗ ಚಿತ್ರವೊಂದನ್ನ ನಿರ್ಮಾಣ ಮಾಡುತ್ತಿದ್ದು, ಅದಕ್ಕೆ ಡಾರ್ಲಿಂಗ್ಸ್ ಅಂತ ಹೆಸರಿಟ್ಟಿದ್ದಾರೆ. ಆ ಚಿತ್ರದಲ್ಲಿ ತನಗೂ ಅವಕಾಶ ಕೊಡಿ. ನಾನು ಸರಿಯಾದ ಸಮಯಕ್ಕೆ ಶೂಟಿಂಗ್ ಬರುತ್ತೇನೆ ಎಂದು ಟ್ವೀಟ್ ಮಾಡಿರುವ ಶಾರೂಖ್ ಖಾನ್, ಅದನ್ನು ತಮಾಷೆಗೆ ಮಾಡಿದ್ದರೂ ಎಲ್ಲರಿಗೂ ಅಚ್ಚರಿಕೆ ಮೂಡಿಸಿದೆ!
ಆಲಿಯಾ ನಿರ್ಮಾಣದ ಚೊಚ್ಚಲ ಚಿತ್ರ!
ಬಾಲಿವುಡ್ ನ ಬಿಳಿಗಲ್ಲದ ಬೆಡಗಿ ಆಲಿಯಾ ಭಟ್ ಸಾಕಷ್ಟು ಸಿನೆಮಾಗಳಲ್ಲಿ ನಟಿಸಿ ಹೆಸರು ಮಾಡಿದವರು. ಅದೇ ಆಲಿಯಾ ಇದೀಗ ಸಿನೆಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಸಿನೆಮಾವನ್ನು ಅವರು ಶಾರೂಖ್ ರ ಜೊತೆ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಎರಡು ಸೂಪರ್ ಸ್ಟಾರ್ ಗಳು ಸೇರಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇದ್ದು, ಆಲಿಯಾ ಈ ಚಿತ್ರದಲ್ಲಿ ನಟನೆಯ ಜೊತೆಜೊತೆಗೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ.
ಶಾರೂಖ್ ತಮಾಷೆಗೆ ಟ್ವೀಟ್ ಮಾಡಿದ್ರು!
ಶಾರೂಖ್ ಹಾಗೂ ಆಲಿಯಾ ಒಟ್ಟಿಗೇ ಈ ಚಿತ್ರ ನಿರ್ಮಿಸುತ್ತಿದ್ದರೂ ಹೀಗೊಂದು ತಮಾಷೆಯ ಪೋಸ್ಟ್ ಹಾಕುವ ಮೂಲಕ ಅವರ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ. ಆಲಿಯಾ ಅವರಿಗೆ ದಯವಿಟ್ಟು ಎಂದು ರಿಕ್ವೆಸ್ಟ್ ಮಾಡಿಕೊಂಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಅಂದಹಾಗೇ ಈ ಚಿತ್ರದಲ್ಲಿ ಶೆಫಾಲಿ ಶಾ, ವಿಜಯ್ ಶರ್ಮಾ, ರೋಷನ್ ಮ್ಯಾಥ್ಯೂ ಸೇರಿದಂತೇ ಸಾಕಷ್ಟು ಕಲಾವಿದರು ನಟಿಸುತ್ತಿದ್ದಾರೆ.




