ಶ್ರೀರಾಮುಲು ಆಪ್ತನ ಬಿಡುಗಡೆ ಮಾಡಿದ ಸಿಸಿಬಿ

ಬೆಂಗಳೂರು: ಶ್ರೀರಾಮುಲು ಆಪ್ತನನ್ನು ನಿನ್ನೆ ರಾತ್ರಿಯಿಂದ ಮಧ್ಯಾಹ್ನದವರೆಗೂ ವಿಚಾರಣೆ ನಡೆಸಿ ಬಳಿಕ ಬಿಡುಗಡೆ ಮಾಡಲಾಗಿದೆ.
ನಿನ್ನೆ ರಾತ್ರಿ ಶ್ರೀರಾಮುಲು ಅವರ ಕ್ವಾರ್ಟರ್ಸ್ಗೆ ನುಗ್ಗಿ ಆಪ್ತ ರಾಜಣ್ಣನನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಆತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಆತನ ಮೊಬೈಲ್ ವಶಕ್ಕೆ ಪಡೆದಿದ್ದು, 3 ಆಡಿಯೋಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: ಆಪ್ತನ ಬಂಧನ; ಅಸಮಾಧಾನಗೊಂಡ ಶ್ರೀರಾಮುಲು ಸಮಾಧಾನಿಸಲು ಸಿಎಂ ಯತ್ನ?
ಬಿಎಸ್ವೈ ವಿರುದ್ಧ ತಂತ್ರ ಹೆಣೆಯುತ್ತಿದ್ದ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರಿಗೆ ಎದಿರೇಟು ಕೊಡಲೆಂದೇ ಆಪ್ತನ ಬಂಧನವಾಗಿತ್ತೆಂಬ ಮಾತುಗಳಿವೆ. ಈ ಮಧ್ಯೆ, ತಮ್ಮನ್ನು ಒಂದು ಮಾತೂ ಕೇಳದೆ ಆಪ್ತನನ್ನು ಬಂಧಿಸಿರುವುದಕ್ಕೆ ಬೆಳಗ್ಗೆ ಶ್ರೀರಾಮುಲು ಅಸಮಾಧಾನ ವ್ಯಕ್ತಪಡಿಸಿದ್ದರು. ಅವರನ್ನು ಕರೆಸಿ ಮಾತನಾಡಲು ಸಿಎಂ ಯತ್ನಿಸಿದ್ದಾರೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಭಿನ್ನ ಬಣದ ಶ್ರೀರಾಮುಲುಗೆ ಬಿಎಸ್ವೈ ಎದಿರೇಟು; ಇದು ಆಪ್ತನ ಬಂಧನದ ಅಸಲಿಯತ್ತು!
