Latestಮೆಟ್ರೋ

ಆಪ್ತನ ಬಂಧನ; ಅಸಮಾಧಾನಗೊಂಡ ಶ್ರೀರಾಮುಲು ಸಮಾಧಾನಿಸಲು ಸಿಎಂ ಯತ್ನ?

ಬೆಂಗಳೂರು: ಸಚಿವ ಶ್ರೀರಾಮುಲು ಅವರ ಆಪ್ತ ಎನ್ನಲಾದ ರಾಜಣ್ಣ ಎಂಬ ವ್ಯಕ್ತಿಯನ್ನು ಹೆಸರು ದುರ್ಬಳಕೆ ಆರೋಪದ ಮೇಲೆ ಸಿಸಿಬಿ ಪೊಲೀಸರು ಬಂಧಿಸಿದ್ದು, ಎಫ್​ಐಆರ್ ದಾಖಲಿಸಿದ್ದಾರೆ.

ತಮಗೆ ಹೇಳದೆ ಕೇಳದೆ ಬಂಧಿಸಿದ್ದಕ್ಕೆ ಸಚಿವ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ವಿಜಯೇಂದ್ರ ಹೆಸರು ಹೇಳಿಕೊಂಡು ಹಣಕ್ಕೆ ಬೇಡಿಕೆಯಿಡುತ್ತಿದ್ದರು ಎಂಬುದು ರಾಜಣ್ಣ ಮೇಲೆ ಬಂದಿರುವ ಆರೋಪ. ಆದರೆ, ಬಂಧನಕ್ಕೆ ಮೊದಲು ಈ ಬಗ್ಗೆ ಶ್ರೀರಾಮುಲು ಅವರಿಗೆ ಯಾವ ಮಾಹಿತಿಯೂ ಇರಲಿಲ್ಲ ಎಂಬುದನ್ನು ಸ್ವತಃ ಅವರೇ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದ ಎದುರು ಮಾತನಾಡಿದ ವೇಳೆ, ತಮಗೆ ಈ ಬಗ್ಗೆ ಏನೂ ಗೊತ್ತಿರಲಿಲ್ಲ. ಮಾಧ್ಯಮಗಳಲ್ಲಿ ನೋಡಿಯೇ ತಿಳಿದುಕೊಂಡೆ. ವಿಜಯೇಂದ್ರ ಅವರೂ ಕೂಡ ಈ ಬಗ್ಗೆ ತಮಗೆ ತಿಳಿಸಲಿಲ್ಲ ಎಂದು ಶ್ರೀರಾಮುಲು ಹೇಳಿದ್ದಾರೆ.

ರಾಜಣ್ಣ ನನಗೆ ಗೊತ್ತಿರುವ ಹುಡುಗ. ಒಂದು ವೇಳೆ ಆತ ಹೆಸರು ದುರ್ಬಳಕೆ ಮಾಡಿಕೊಂಡಿದ್ದರೆ ಅದರ ವಿರುದ್ಧ ಕಾನೂನಿನಂತೆ ಕ್ರಮ ಕೈಗೊಳ್ಳಬೇಕು. ವಿಜಯೇಂದ್ರ ಜೊತೆ ಮಾತನಾಡುವೆ ಎಂದರು.

ಈ ನಡುವೆ, ಶ್ರೀರಾಮುಲು ಅವರಿಗೆ ಅಸಮಾಧಾನವಾಗಿದೆ ಎಂಬ ಮಾತುಗಳೂ ಕೇಳಿಬಂದಿದ್ದು, ಅವರನ್ನು ಕರೆಸಿ ಮಾತನಾಡಲು ಸಿಎಂ ಮುಂದಾಗಿದ್ದಾರೆ ಎಂಬ ವರದಿಗಳೂ ಇವೆ.

ಇದನ್ನೂ ಓದಿ: ಭಿನ್ನ ಬಣದ ಶ್ರೀರಾಮುಲುಗೆ ಬಿಎಸ್​ವೈ ಎದಿರೇಟು; ಇದು ಆಪ್ತನ ಬಂಧನದ ಅಸಲಿಯತ್ತು!

Spread the love

Related Articles

Leave a Reply

Your email address will not be published. Required fields are marked *

Back to top button