ಸಿನಿಮಾಸೆಲೆಬ್ರಿಟಿ

ಯಾಕ್ಹಿಂಗಾಡ್ತಾರಪ್ಪಾ ಜಗ್ಗಣ್ಣ?

ನವರಸ ನಾಯಕ ಜಗ್ಗೇಶ್ ಅವರು ರಾಯರ ಮಹಾನ್ ಭಕ್ತರು ನಿಜ. ಹಾಗಂತ ಯಾಂತ್ರಿಕ ಮತ್ತು ತಾಂತ್ರಿಕ ತೊಂದರೆಯಿಂದ ಆದ ಮಗನ ಕಾರ್ ಆಕ್ಸಿಡೆಂಟ್ ಅಲ್ಲೂ ರಾಯರ ದಯೆ ಎಂದು ಅದ್ಯಾಕೆ ಸೇರಿಸಿ ಸುದ್ದಿಯಾಗುತ್ತಾರೋ ಗೊತ್ತಿಲ್ಲ!

ಟ್ವೀಟ್ ಮಾಡಿದ್ದನ್ನು ಡಿಲಿಟ್ ಮಾಡಿದ್ರು!
ಜಗ್ಗೇಶ್ ಸೆಕೆಂಡ್ ಸನ್-ಯತಿರಾಜ್ ಕಾರು ಆಕ್ಸಿಡೆಂಟ್ ಆಗಿದ್ದು ನಿಮಗೆ ಗೊತ್ತೇ ಇದೆ. ಬೆಂಗಳೂರು ಹೈದರಾಬಾದ್ ರಸ್ತೆಯಲ್ಲಿ ಅದು ಮೂರು ಬಾರಿ ಪಲ್ಟಿ ಹೊಡೆದರೂ ಪವಾಡ ಸದೃಶ ರೀತಿಯಲ್ಲಿ ಯತಿ ಪಾರಾಗಿದ್ದು ಅಷ್ಟೇ ಸತ್ಯ. ಅದು ಬಿಎಂಡಬ್ಲ್ಯೂ ಕಾರ್ ಆಗಿರದೇ ಇದ್ದಿದ್ದರೆ ಅದು ಜಖಂಗೊಂಡ ಪರಿಸ್ಥಿತಿ ನೋಡಿದರೆ ಖಂಡಿತ ಯತಿಯ ಪರಿಸ್ಥಿತಿ ತುಂಬಾ ಹದಗೆಟ್ಟಿರೋದು. ಆದರೆ ಅದ್ಯಾವುದೂ ಆಗದೇ ಇರುವುದಕ್ಕೆ ಕಾರಣ ಕಾರಿನಲ್ಲಿದ್ದ ಏರ್ ಬ್ಯಾಗ್ ಗಳು. ಅದ್ಯಾವಾಗ ಕಾರು ಪಲ್ಟಿ ಹೊಡೆಯಲು ಸಜ್ಜಾಯಿತೋ ಆ ವೇಗಕ್ಕೆ ಕಾರ್ ಒಳಗಿದ್ದ ಎಲ್ಲಾ ಏರ್ ಬ್ಯಾಗ್ ಗಳೂ ಓಪನ್ ಆಗಿವೆ. ಬಲೂನ್ ರೀತಿಯಲ್ಲಿ ಅದು ಊದಿಕೊಂಡು ಜಗ್ಗೇಶ್ ಮಗ ಯತಿಯನ್ನು ಸೇಫ್ ಮಾಡಿದೆ. ಅದೊಂದೇ ಕಾರಣಕ್ಕೆ ಅಪಘಾತದ ತೀವ್ರತೆ ಎಷ್ಟೇ ಇದ್ದರೂ ಯತಿರಾಜ್ ದೇಹ ಮತ್ತು ಜೀವ ಉಳಿದಿದೆ.

ಈ ಹಂತದಲ್ಲಿ ಆ ರೀತಿ ಟ್ವೀಟ್ ಮಾಡಿಬಿಟ್ಟರು!
ಗುರು ರಾಘವೇಂದ್ರ ಸ್ವಾಮಿಗಳ ದಯದಿಂದ ನನ್ನ ಮಗನಿಗೆ ಏನೂ ಆಗಿಲ್ಲ ಎಂದು ತಮ್ಮದೇ ಶೈಲಿಯಲ್ಲಿ ಜಗ್ಗೇಶ್ ಒಂದು ಟ್ವೀಟ್ ಮಾಡಿಬಿಟ್ಟರು. ಆ ಟ್ವೀಟ್ ಗೆ ಒಂದಷ್ಟು ಕಾಮೆಂಟ್ ಗಳು, ಡಿಸ್ ಲೈಕ್ ಗಳು ಎಕ್ಸೆಟ್ರಾ ಗಳು ಗಳು ಗಳು ಗಳು ಬಂದಾಗ ಅದನ್ನೂ ಡಿಲಿಟ್ ಮಾಡಿಬಿಟ್ಟರು ಜಗ್ಗಣ್ಣ!
ಇವೆಲ್ಲಾ ಮಾಡುವುದನ್ನು ಬಿಟ್ಟು ಮಗ ಹುಷಾರಾಗಿದ್ದಾನೆ. ಪ್ರೀತಿ ತೋರಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದರೆ ಆಗುತ್ತಿತ್ತಲ್ಲವಾ?!
ಅಂದಹಾಗೇ ಅಪಘಾತ ಆಗಿ ಆ ಆಕ್ಸಿಡೆಂಟ್ ಸಮಯದಲ್ಲಿ ತೆಗೆದ ವೀಡಿಯೋ ಒಂದು ವೈರಲ್ ಆಗುವುದಕ್ಕೂ ಮುನ್ನ ಜಗ್ಗೇಶ್ ದೊಡ್ಡ ಮಗನಿಗೆ ಆಕ್ಸಿಡೆಂಟ್ ಆಗಿದೆ ಎನ್ನುತ್ತಲೇ ಇದ್ದರು. ನಂತರ ಕಿರಿಮಗ ಯತಿರಾಜ್ ಕಾರಿನಿಂದ ಹೊರಬಿದ್ದು ಓಲಾಡಿ, ತೂರಾಡಿದ ನಂತರವೇ ಗೊತ್ತಾಗಿದ್ದು ಅದು ಮೊದಲ ಮಗ ಅಲ್ಲ, ಎರಡನೇ ಸುಪುತ್ರ ಎಂದು!

Spread the love

Related Articles

Leave a Reply

Your email address will not be published. Required fields are marked *

Back to top button