ಬುಧವಾರ ಒಡಿಶಾಕ್ಕೆ ಅಪ್ಪಳಿಸಲಿರುವ ಯಾಸ್; ಇಡೀ ದಿನ ಕೋಲ್ಕತಾ ಏರ್ಪೋರ್ಟ್ ಸ್ಥಗಿತ

ನವದೆಹಲಿ: ಯಾಸ್ ಚಂಡಮಾರುತವು ನಾಳೆ ಮಧ್ಯಾಹ್ನ ಒಡಿಶಾ ಕರಾವಳಿಯ ಧಮ್ರಾ ಬಂದರು ಮತ್ತು ಬಾಲಸೋರ್ ನಡುವೆ ಅಪ್ಪಳಿಸಲಿದೆ. ಗಾಳಿಯ ವೇಗ ಗಂಟೆಗೆ 185 ಕಿ.ಮೀ. ಇದು ಬಂಗಾಳದಲ್ಲೂ ಹಾದುಹೋಗುವ ನಿರೀಕ್ಷೆಯಿದೆ. ಎರಡೂ ರಾಜ್ಯಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ.
ಒಡಿಶಾದಲ್ಲಿ ಸುಮಾರು 14 ಲಕ್ಷ ಜನರನ್ನು ಮತ್ತು ಬಂಗಾಳದಲ್ಲಿ 5 ಲಕ್ಷ ಜನರನ್ನು ಸುರಕ್ಸ್ಥಷಿತ ಪ್ಳಾಂರದೇಶಗಳಿಗೆ ತರಿಸಲಾಗಿದೆ. ಸಾಮಾಜಿಕ ದೂರವನ್ನು ಕಾಪಾಡಿಕೊಂಡು ಅವರಿಗೆ ವಸತಿ ಒದಗಿಸುವುದು ಸವಾಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಡಿಶಾದ ಜಗತ್ಸಿಂಗ್‌ಪುರ, ಕೇಂದ್ರಪಾರ, ಭದ್ರಾಕ್ ಮತ್ತು ಬಾಲಸೋರ್ ಜಿಲ್ಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಬಂಗಾಳದಲ್ಲಿ, ಪಶ್ಚಿಮ ಮಿಡ್ನಾಪೋರ್, ಉತ್ತರ ಮತ್ತು ದಕ್ಷಿಣ 24 ಪರಗಣಗಳು ಮತ್ತು ರಾಜ್ಯ ರಾಜಧಾನಿ ಕೋಲ್ಕತಾದಲ್ಲಿ ಇದರ ಪ್ರಭಾವವಿರುತ್ತದೆ. ಗಂಟೆಗೆ 120 ಕಿ.ಮೀ ವೇಗದಲ್ಲಿ ಚಂಡಮಾರುತ ಹಾಯಲಿದೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ರಾತ್ರಿ ರಾಜ್ಯ ಕಾರ್ಯದರ್ಶಿಯಲ್ಲಿ ಉಳಿಯುವುದಾಗಿ ಘೋಷಿಸಿದ್ದಾರೆ.
ಕೋಲ್ಕತಾ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆಯನ್ನು ಮೇ 26ರ ಬೆಳಿಗ್ಗೆ 8:30ರಿಂದ ಸಂಜೆ 7:45 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ವಿಮಾನ ನಿಲ್ದಾಣ ಆಡಳಿತವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.




