ರೇಣುಕಾಚಾರ್ಯ ಕೆಲಸಕ್ಕೆ ರಾಜೇಶ್ ಕೃಷ್ಣನ್ ಮೆಚ್ಚುಗೆ!

ಪೂರ್ಣ ವಿ-ರಾಮ
ಕೋವಿಡ್ ಮಹಾಮಾರಿಗೆ ಇಡೀ ಜಗತ್ತೇ ನಲುಗಿ ಹೋಗಿದೆ. ಬದುಕುವುದೇ ಕಷ್ಟವಾಗಿ ಹೋಗೋ ಪರಸ್ಥಿತಿ ತಂದುಬಿಟ್ಟಿದೆ ಕೊರೋನಾ ಎಂಬ ಕೆಟ್ಟ ವೈರಸ್. ಇಂಥ ಕಡು ಕಷ್ಟ ಸಂದರ್ಭದಲ್ಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ತಮ್ಮ ಕ್ಷೇತ್ರದ ಜನತೆಯ ಕೈ ಹಿಡಿದಿದ್ದಾರೆ. ಆ ಮೂಲಕ ಸಾರ್ಥಕತೆ ಮರೆದಿದ್ದಾರೆ ಎಂದಿದ್ದಾರೆ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್!
ಹೊನ್ನಾಳಿ ಜನತೆ ಪುಣ್ಯ ಮಾಡಿದ್ದಾರೆ!
ರೇಣುಕಾಚಾರ್ಯರಂಥ ಜನಸೇವಕರನ್ನು ಪಡೆಯಲು ದಾವಣಗೆರೆ ಜಿಲ್ಲೆಯ ಹೊನ್ನಾಳಿ ಜನತೆ ಪುಣ್ಯ ಮಾಡಿದ್ದಾರೆ. ಜನಸೇವೆಯೇ ಜನಾರ್ಧನ ಸೇವೆ ಎಂದುಕೊಂಡು ರೇಣುಕಾಚಾರ್ಯ ತಾವೇ ರಸ್ತೆಗಿಳಿದು ಸರ್ವೀಸ್ ಮಾಡುತ್ತಿದ್ದಾರೆ. ಕೊರೋನಾ ಸಂಕಷ್ಟದಲ್ಲಿ ಅವರೇ ನಿಂತು ಜನಸೇವೆಗೆ ಮುಂದಾಗಿದ್ದಾರೆ. ಅಂಥ ಜನಪ್ರತಿನಿಧಿಯನ್ನು ಪಡೆಯಲು ಆ ಕ್ಷೇತ್ರದ ಜನತೆ ನಿಜಕ್ಕೂ ಅದೃಷ್ಟ ಮಾಡಿದ್ದಾರೆ ಎಂದು ರೇಣುಕಾಚಾರ್ಯರ ನಿಶ್ಪಕ್ಷಪಾತ ಸೇವೆಯನ್ನು ಹಾಡಿ ಹೊಗಳಿದ್ದಾರೆ ಗಾಯಕ ರಾಜೇಶ್.
ರಾಜೇಶ್ ಮಾತಿನಲ್ಲಿ ಅರ್ಥವಿದೆ!
ರೇಣುಕಾಚಾರ್ಯ ವಯಕ್ತಿಕವಾಗಿ ಏನೇ ಇರಲಿ, ಕೆಲಸ ಕಾರ್ಯ ಅಂತ ಬಂದಾಗ ಪೂರ್ಣಪ್ರಮಾಣದಲ್ಲಿ ಅವರು ಜನಸೇವೆಗೆ ಮುಂದಾಗಿದ್ದು, ಕೋವಿಡ್ ಕೇರ್ ಸೆಂಟರ್ ನಲ್ಲೇ ವಾಸ್ತವ್ಯ ಹೂಡಿದ್ದರು. ಸ್ವತಃ ಅವರೇ ಆಂಬುಲೆನ್ಸ್ ಓಡಿಸಿಕೊಂಡು ಹೋಗಿ ಜನರನ್ನು ರಕ್ಷಿಸಿದ್ದರು. ಎರಡನೇ ಅಲೆ ಸಂದರ್ಭದಲ್ಲಂತೂ ಯಾವುದನ್ನೂ ಲೆಕ್ಕಿಸದೇ ಓಡಾಡಿ ಕೆಲಸ ಮಾಡಿದ್ದರು. ಆ ನಿಸ್ವಾರ್ಥ ಸೇವೆಯಿಂದ ಅವರು ಇಡೀ ರಾಜ್ಯಕ್ಕೇ ಮಾದರಿಯಾಗಿದ್ದಾರೆ ಎನ್ನುವುದು ರಾಜೇಶ್ ಅವರ ಮಾತಿನ ತಾತ್ಪರ್ಯ ಮತ್ತು ಅದು ಸತ್ಯ ಕೂಡ!




