ಮೆಟ್ರೋ
ಜಯದೇವ ಆಸ್ಪತ್ರೆ ನಿರ್ದೇಶಕರಾಗಿ ಡಾ. ಮಂಜುನಾಥ್ ಸೇವಾವಧಿ ಇನ್ನೊಂದು ವರ್ಷ ವಿಸ್ತರಣೆ

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರ ಸೇವೆಯನ್ನು ಒಂದು ವರ್ಷಗಳ ಕಾಲ ಅಂದರೆ, 2022ರ ಜೂನ್ವರೆಗೆ ವಿಸ್ತರಿಸಲಾಗಿದೆ. ಡಾ.ಮಂಜುನಾಥ್ ವಿಸ್ತರಿತ ಸೇವಾ ಅವಧಿ ಬುಧವಾರ ಅಂತ್ಯವಾಗಲಿತ್ತು.
ಕೋವಿಡ್ ಸಂದರ್ಭದಲ್ಲಿ ಖ್ಯಾತ ವೈದ್ಯರೂ ಆಗಿರುವ ಅನುಭವಿ ಡಾ.ಮಂಜುನಾಥ್ ಸೇವೆಯನ್ನು ವಿಸ್ತರಿಸುವಂತೆ ಹಲವಾರು ಪ್ರಮುಖರು ಸಿಎಂ ಯಡಿಯೂರಪ್ಪ ಅವರ ಗಮನಕ್ಕೆ ತಂದಿದ್ದರು.
ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ, ಡಾ.ಮಂಜುನಾಥ್ ಅವರ ಸೇವಾವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.



