ಅವರಾಗಿಯೇ ಮೇಲೆ ಬಂದ್ರೆ ನಾವು ಎದುರಿಸುತ್ತೇವೆ; ಮಹಾರಾಷ್ಟ್ರಕ್ಕೆ ಟಾಂಗ್ ಕೊಟ್ಟ ಟಿ.ಎಸ್.ನಾಗಾಭರಣ

ಚಿಕ್ಕೋಡಿ: ಕನ್ನಡಿಗರು ಇನ್ನೊಬ್ಬರ ಮೇಲೆ ಏರಿ ಹೋದವರಲ್ಲ. ಸಮಸ್ಯೆಗಳು ಬಂದಾಗ ಅದಕ್ಕೆ ಎದೆಗೊಟ್ಟು ನಿಲ್ಲುವವನೆ ಹೊರತು ಯಾವತ್ತೂ ಏರಿ ಹೋದವನಲ್ಲ.
ಬೆಳವಡಿ ಮಲ್ಲಮ್ಮ ಶಿವಾಜಿಯ ಸೈನ್ಯವನ್ನ 6 ತಿಂಗಳ ಕಾಲ ತಡೆಯುತ್ತಾಳೆ ಅದೂ ಸಹ ಸ್ತ್ರೀ ಸೈನ್ಯದ ಮೂಲಕ. ಇದರ ಮೇಲೆ ನೀವೆ ಲೆಕ್ಕ ಹಾಕಿ ನಮ್ಮ ನಮ್ಮ ಸಂಯಮ ಎಂಥದ್ದು ಅಂತ. ಅವರಾಗೆ ಅವರೇ ನಮ್ಮ ಮೇಲೆ ಬಂದಾಗ ನಾವು ಅವರನ್ನ ಎದುರಿಸುತ್ತೇವೆ ಎಂದು ಕಸಾಪ ಅಧ್ಯಕ್ಷ ಟಿ.ಎಸ್.ನಾಗಾಭರಣ
ಹೇಳಿದರು. ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಮೌನ ವಿಚಾರವಾಗಿ ಅವರು ಮಾತನಾಡಿದರು. ಭಾವನಾತ್ಮಕವಾಗಿ ಎದುರಿಸಿದರೆ ಸಾಕಾ ಅಥವಾ ಅದನ್ನ ಕಾನೂನಾತ್ಮಕವಾಗಿ ಎದುರಿಸಬೇಕಾ ಎಂದು ಪ್ರಶ್ನಿಸಿದರು. ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸಿದಾಗ ಮಾತ್ರ ಅದು ಪರಿಹಾರ. ಮಹಾರಾಷ್ಟ್ರದಿಂದ ಬರ್ತಿನಿ ಎನ್ನುವವರ ಉದ್ದೇಶವೇ ರಾಜಕೀಯ. ಅದರಲ್ಲೂ ರಾಜಕೀಯ ಬೆರೆತ ಕೂಡಲೇ ಕ್ಲಿಷ್ಟವಾಗುತ್ತೆ ಎಂದರು.
ಜನ ಸೇವಕರಾಗಿ ಜನ ಸೇವೆಯ ಆಯಾಮ ಇದ್ರೆ ಅದನ್ನ ಮೆಚ್ಚಬಹುದು. ಇಲ್ಲಿ ನೈತಿಕತೆಯ ಹೋರಾಟ ಇಲ್ಲವೇ ಇಲ್ಲ. ಆನೆ ನಡೆದಿದ್ದೆ ದಾರಿ ನಾಯಿ ಬೊಗಳತಾನೇ ಇರುತ್ತೆ. ನಿಪ್ಪಾಣಿ ನಗರ ಸಭೆಯ ಮೇಲೆ ಭಗ್ವಾ ಧ್ವಜ ಹಾರಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಇನ್ನೂ ಎರಡ್ಮೂರು ವರ್ಷ ಕಾಯಿರಿ ಇಲ್ಲಿಯದ್ದು ತೆಗೆಯಬಹದು. ಯಾಕೆಂದರೆ ಮನಸುಗಳು ಬಹಳ ಮುಖ್ಯ. ಮನಸುಗಳನ್ನು ಒಗ್ಗೂಡಿಸಿಬೇಕು, ಕಾನೂನಾತ್ಮಕಾವಾಗಿ ಅದನ್ನ ನೋಡಬೇಕು ಎಂದು ಟಿ.ಎಸ್.ನಾಗಾಭರಣ ಹೇಳಿದರು.
