Breaking NewsLatestಜಿಲ್ಲಾ ಸುದ್ದಿರಾಜ್ಯಸುದ್ದಿ

ಸಚಿವ ಅನಂದ್ ಸಿಂಗ್ ಮಗಳ ಮದುವೆ ಆರತಕ್ಷತೆ ಸಮಾರಂಭ

ಹೊಸಪೇಟೆ: ರಾಜಮನೆತನಗಳ ವೈಭವೋಪೇತ ವಿವಾಹ ಮಹೋತ್ಸವಗಳು ಹೇಗೆ ನಡೆಯುತ್ತಿದ್ದವು ಅಂತ ನಾವೆಲ್ಲ ಬರೀ ಓದಿದ್ದು ಮತ್ತು ಸಿನಿಮಾಗಳಲ್ಲಿ ನೋಡಿದ್ದಷ್ಟೇ.

ಆದರೆ, ಸಚಿವ ಅನಂದ್ ಸಿಂಗ್ ಅವರು ಹೊಸಪೇಟೆಯಲ್ಲಿ ತಮ್ಮ ಮಗಳ ಆರತಕ್ಷತೆಯನ್ನು ನಡೆಸಿದ ಅದ್ದೂರಿತನ ನೋಡುತ್ತಿದ್ದರೆ ಗತವೈಭವದ ಮದುವೆಗಳು ನೆನಪಿಗೆ ಬರುತ್ತವೆ. ರಿಸಿಪ್ಷನ್ ಗಾಗಿ ವಿಜಯನಗರ ಸಾಮ್ರಾಜ್ಯದ ಕೋಟೆಯನ್ನು ಹೋಲುವ ಸೆಟ್ ನಿರ್ಮಿಸಲಾಗಿದೆ ಮತ್ತು ಅದಕ್ಕೆ ಪೂರಕವೆನಿಸುವ ಎಲ್ಲ ವ್ಯವಸ್ಥೆಗಳನ್ನು ವಿಡಿಯೋದಲ್ಲಿ ನೋಡಬಹುದು. ಸಚಿವರ ಸುಂದರ ಮಗಳು ವೈಷ್ಣವಿ ಸಿಂಗ್ ವಿವಾಹವು ರಾಜಸ್ತಾನದ ಯಶೋರಾಜ್ ಸಿಂಗ್ ಜಾಧೋನ್ ಹೆಸರಿನ ಸ್ಫುರದ್ರೂಪಿ ಯುವಕನೊಂದಿಗೆ ಡಿಸೆಂಬರ್ 5 ರಂದು ಜೈಪುರ ನಗರದ ಪಿಂಕ್ ಪ್ಯಾಲೇಸ್ ನಲ್ಲಿ ನಡೆದಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button